ADVERTISEMENT

ಲೋಕಾಯುಕ್ತ ದಾಳಿ: ಕ್ರೈಸ್‌ ಎಸ್‌ಇ ಜನಾರ್ಧನ್‌ ಮನೆಯಲ್ಲಿ ₹1.70 ಕೋಟಿ ನಗದು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 11:09 IST
Last Updated 12 ಫೆಬ್ರುವರಿ 2026, 11:09 IST
<div class="paragraphs"><p>₹1.70 ಕೋಟಿ ನಗದು</p></div>

₹1.70 ಕೋಟಿ ನಗದು

   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಪ್ರಕರಣದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್‌) ಸೂಪರಿಂಟೆಂಡೆಂಟ್ ಎಂಜಿನಿಯರ್ ಎಚ್‌.ಎಂ.ಜನಾರ್ಧನ್‌ ಅವರ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ₹1.70 ಕೋಟಿ ನಗದು ಪತ್ತೆಯಾಗಿದೆ.

ಜನಾರ್ಧನ್‌ ಮತ್ತು ಅವರ ಆಪ್ತರ ಮನೆಗಳ ಮೇಲೆ ಬೆಳಿಗ್ಗೆಯೇ ದಾಳಿ ನಡೆಸಲಾಗಿದ್ದು, ಶೋಧ ಮುಂದುವರೆದಿದೆ. ನಗದು ಎಣಿಕೆ ಮಾಡಲು ಯಂತ್ರಗಳನ್ನು ಬಳಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶೋಧ ಮುಂದುವರೆದಿದ್ದು, ಆಪಾದಿತ ಅಧಿಕಾರಿಯ ಒಟ್ಟು ಆಸ್ತಿಯ ವಿವರ ನೀಡಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.