ADVERTISEMENT

ಒಕ್ಕಲಿಗ, ವೀರಶೈವರ ರೀತಿ ಮಾದರ ಮಹಾಸಭಾ: ಸಚಿವ ಕೆ.ಎಚ್‌. ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 16:16 IST
Last Updated 13 ಜುಲೈ 2025, 16:16 IST
<div class="paragraphs"><p>ಕೆ.ಎಚ್‌. ಮುನಿಯಪ್ಪ</p></div>

ಕೆ.ಎಚ್‌. ಮುನಿಯಪ್ಪ

   

ಬೆಂಗಳೂರು: ಒಕ್ಕಲಿಗರ ಸಂಘ, ವೀರಶೈವ ಮಹಾಸಭಾ, ಕುರುಬರ ಸಂಘದ ರೀತಿ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು, 12 ವರ್ಷಗಳ ನಂತರ ಸದಸ್ಯತ್ವ ನೋಂದಣಿಗೆ ವೇಗ ನೀಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.

ಕರ್ನಾಟಕ ಮಾದರ ಮಹಾಸಭಾ ಭಾನುವಾರ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಸದಸ್ಯತ್ವಕ್ಕೆ ₹500, ಆಜೀವ ಸದಸ್ಯತ್ವಕ್ಕೆ ₹25,000, ಪೋಷಕ ಸದಸ್ಯತ್ವಕ್ಕೆ ₹50,000, ಮಹಾಪೋಷಕ ಸದಸ್ಯತ್ವಕ್ಕೆ ₹1 ಲಕ್ಷ ನಿಗದಿ ಮಾಡಲಾಗಿದೆ. ರಾಜ್ಯ ಸಮಿತಿಗೆ ಚುನಾವಣೆ ಮೂಲಕ ಆಯ್ಕೆ ನಡೆಯಬೇಕು. ಉತ್ತಮ ಬುನಾದಿ ಹಾಕಲು ಎಲ್ಲ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.

ADVERTISEMENT

‘ಎನ್‌. ರಾಚಯ್ಯ ನಮ್ಮ ಹೋರಾಟಕ್ಕೆ ಪ್ರೇರಣೆ. ಇಷ್ಟು ದಿನವಾದರೂ ಸಂಘ ಕಟ್ಟುವಲ್ಲಿ ವಿಫಲರಾಗಿದ್ದೇವೆ. ಪಕ್ಷಭೇದ ಮರೆತು ಸಂಘ ಕಟ್ಟಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಂಘಕ್ಕೆ ಶಾಶ್ವತ ನೆಲೆ ಕಲ್ಪಿಸಲು ನಿವೇಶನ ಒದಗಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ’ ಎಂದು ಹೇಳಿದರು.

ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದರಾದ ಎಲ್. ಹನುಮಂತಯ್ಯ, ಬಿ.ಎನ್. ಚಂದ್ರಪ್ಪ, ಮುಖಂಡರಾದ ತಿಮ್ಮಯ್ಯ, ಆರ್. ಧರ್ಮಸೇನ, ಡಾ.ಎಚ್. ನಟರಾಜ್, ಶಿವಪ್ಪ, ಪುರುಷೋತ್ತಮ್‌, ದೊಡ್ಡೇರಿ ವೆಂಕಟೇಶ್‌, ಕೋಗಿಲು ವೆಂಕಟೇಶ್‌, ರಾಮಕೃಷ್ಣ, ಮಾತಾಂಗ ಲೋಕೇಶ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.