ADVERTISEMENT

ಮಹದಾಯಿ: ರಾಜ್ಯಕ್ಕೆ 5.5 ಟಿಎಂಸಿ ನೀರು ಹಂಚಿಕೆ ಮಾಡಿ ನ್ಯಾಯಮಂಡಳಿ ತೀರ್ಪು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2018, 10:32 IST
Last Updated 14 ಆಗಸ್ಟ್ 2018, 10:32 IST
   

ನವದೆಹಲಿ:ಮಹದಾಯಿ ನ್ಯಾಯಮಂಡಳಿ ಮಂಗಳವಾರ ಮಹದಾಯಿ ನೀರು ಹಂಚಿಕೆ ತೀರ್ಪು ಪ್ರಕಟಿಸಿದ್ದು, ರಾಜ್ಯಕ್ಕೆ 5.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ.

ಕಳಸಾ ‌ನಾಲೆಯಿಂದ 1.72 ಟಿಎಂಸಿ ಅಡಿ, ಬಂಡೂರಿ ನಾಲೆಯಿಂದ 2.18 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಒಟ್ಟು ಬೇಡಿಕೆಯ 7.56 ಟಿಎಂಸಿ ಅಡಿ ಪೈಕಿ 4 ಟಿಎಂಸಿ ಅಡಿ ಹಂಚಿಕೆ ಮಾಡಿದೆ.

ವಿದ್ಯುಚ್ಛಕ್ತಿ ಉತ್ಪಾದನೆಗೆ 8.02 ಟಿಎಂಸಿ ಅಡಿ ಹಂಚಿಕೆ ಮಾಡಿದೆ. ಒಟ್ಟು 13.07 ಟಿಎಂಸಿ ಅಡಿ ಹಂಚಿದೆ.

ADVERTISEMENT

ಅಲ್ಲದೆ 1.50 ಟಿಎಂಸಿ ಅಡಿ ನೀರು ಮಹದಾಯಿ ಜಲಾನಯನ ಪ್ರದೇಶದಲ್ಲಿ ಬಳಕೆ ಮಾಡಲು ಹಂಚಿಕೆ ಮಾಡಿದೆ.

ನ್ಯಾಯ ಮಂಡಳಿ ಐ ತೀರ್ಪುಬಹುತೇಕ ಕರ್ನಾಟಕದ ಪರ‌ ಇದೆ. ಮಲಪ್ರಭಾಗೆ ಕಳಸಾ ಬಂಡೂರಿಯಿಂದ ಕಣಿವೆಯೇತರ ಬಳಕೆಗೆ 4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ಆದೇಶಿಸಿದರು.

ಕರ್ನಾಟಕ‌ವು ಕುಡಿಯಲು ಕಣಿವೆಯ ಆಚೆಯ ತಿರುವು ಯೋಜನೆಗೆ ಕೇಳಿದ್ದ 7.56 ಟಿಎಂಸಿ ಅಡಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರು ನೀಡಿರುವುದು ಬಹುತೇಕ ಸಮಾಧಾನಕರ. ಮಿಕ್ಕ ಪಾಲನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಪಡೆಯಲು ಅವಕಾಶ ಕಲ್ಪಿಸಿದೆ.

ನ್ಯಾಯಮಂಡಳಿ ಒಟ್ಟು 12 ಸಂಪುಟಗಳಲ್ಲಿ ಐ ತೀರ್ಪು ಪ್ರಕಟಿಸಿದೆ. ಐ ತೀರ್ಪಿನ ಎಲ್ಲ ಪ್ರಕಟಿತ ಸಂಪುಟಗಳನ್ನು ಕೇಂದ್ರದ ಜಲಸಂಪನ್ಮೂಲ ಸಚಿವಾಲಯಕ್ಕೆ ನ್ಯಾಯಮಂಡಳಿ ಸಲ್ಲಿಸಿದೆ.

* ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.