
ಪ್ರಜಾವಾಣಿ ವಾರ್ತೆ
ಮಲಪ್ರಭಾ ನದಿ
ಖಾನಾಪುರ (ಬೆಳಗಾವಿ ಜಿಲ್ಲೆ): ಮಲಪ್ರಭಾ ನದಿಯಲ್ಲಿ ಈಚೆಗೆ ಬಟ್ಟೆ, ಹಾಸಿಗೆ ಸೇರಿದಂತೆ ತ್ಯಾಜ್ಯ ಎಸೆದ ವ್ಯಕ್ತಿಯೊಬ್ಬರಿಂದ ಸ್ಥಳೀಯ ಪಟ್ಟಣ ಪಂಚಾಯತಿಯವರು ₹10 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ತಾಲ್ಲೂಕಿನ ತೀರ್ಥಕುಂಡೆ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಮನೆಯ ಹಾಸಿಗೆ, ಬಟ್ಟೆ ಮತ್ತಿತರ ತ್ಯಾಜ್ಯವನ್ನು ತಮ್ಮ ವಾಹನದಲ್ಲಿ ತಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿ ಸೇತುವೆಯಿಂದ ನದಿಗೆ ಎಸೆದು ತೆರಳಿದ್ದರು. ಪೊಲೀಸರ ನೆರವಿನಿಂದ ಆ ವ್ಯಕ್ತಿಯನ್ನು ಪತ್ತೆ ಮಾಡಿ, ದಂಡ ವಸೂಲಿ ಮಾಡಲಾಯಿತು. ಮುಂದಿನ ದಿನಗಳಲ್ಲಿ ನದಿಯನ್ನು ಮಲಿನಗೊಳಿಸುವವರಿಗೆ ಇದು ಪಾಠ ಆಗಲಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಕುರಬೆಟ್, ಆರೋಗ್ಯ ನಿರೀಕ್ಷಕ ಪ್ರೇಮಾನಂದ ನಾಯ್ಕ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.