ADVERTISEMENT

ಮಂಗಳೂರು: ಬಾಂಬ್‌ 'ಸ್ಫೋಟಿಸಿ' ಪ್ರಾಣಹಾನಿ ತಪ್ಪಿಸಿದ ಭದ್ರತಾ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 13:45 IST
Last Updated 20 ಜನವರಿ 2020, 13:45 IST
   
""

ಮಂಗಳೂರು:ಬಜ್ಪೆ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸುಧಾರಿತ ಬಾಂಬ್‌ ಇರುವ ಬ್ಯಾಗ್‌ ಅನ್ನು ಭದ್ರತಾ ಸಿಬ್ಬಂದಿಗಳುನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಯಶಸ್ವಿಯಾಗಿಸ್ಫೋಟಿಸಿದ್ದಾರೆ.

ಸೋಮವಾರ ಬೆಳಗ್ಗೆವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿನ ಭದ್ರತಾ ತಪಾಸಣಾ ಗೇಟ್ ಬಳಿ ಜೀವಂತ ಬಾಂಬ್‌ ಇರುವ ಬ್ಯಾಗ್ ಪತ್ತೆಯಾಗಿತ್ತು.ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಬಾಂಬ್‌ನಿಷ್ಕ್ರಿಯಗೊಳಿಸಲು ಮುಂದಾದರು.

ADVERTISEMENT

ನಾಣ್ಯ ಸಂಗ್ರಹಕ್ಕೆ ಬಳಸುವ ಲೋಹದ ಡಬ್ಬಿಯಲ್ಲಿ ಬಾಂಬ್‌ ಇಡಲಾಗಿತ್ತು. ಸ್ಫೋಟಕ್ಕೆ ಬಳಸುವ ರಾಸಾಯನಿಕ ಪುಡಿ, ಲೋಹದ ತಂತಿ, ಲೋಹದ ತುಣುಕುಗಳು, ಟೈಮರ್ ಬಳಸಿ ಬಾಂಬ್ ತಯಾರಿಸಲಾಗಿತ್ತು. ಬಳಸಿದ್ದ ಟೈಮರ್ ಸ್ಥಗಿತಗೊಂಡಿತ್ತು ಎಂದುಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು ಸ್ಥಳದಲ್ಲೇ ಮಾಹಿತಿ ನೀಡಿದ್ದರು.

ಬಾಂಬ್‌ ಸ್ಫೋಟಿಸುವ ಸಿದ್ಧತೆಯಲ್ಲಿ ಸಿಬ್ಬಂದಿ

ಭದ್ರತಾ ಸಿಬ್ಬಂದಿಗಳು ಪತ್ತೆಯಾಗಿರುವ ಬ್ಯಾಗ್‌ ಅನ್ನುಬಾಂಬ್‌ ನಿಷ್ಕ್ರಿಯಗೊಳಿಸುವ ವಾಹನದಲ್ಲಿ ಹಾಕಿ ಅದನ್ನುಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಬಂದರು. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಗಳು ಟೈಮರ್ ಸಂಪರ್ಕ ಸ್ಥಗಿತವಾಗಿದ್ದ ಕಾರಣ ಬಾಂಬ್ ಇರುವ ಚೀಲವನ್ನು ತೆರೆಯದೇ ಸ್ಫೋಟಿಸಲು ನಿರ್ಧರಿಸಿದರು.

ಸುಮಾರು 350 ಮೀಟರ್‌ ದೂರದಲ್ಲಿ ಬಾಂಬ್‌ ಚೀಲವನ್ನು ಇರಿಸಿ, ಅಲ್ಲಿ ಸಾಕಷ್ಟು ಮರಳಿನ ಚೀಲಗಳನ್ನು ಪೇರಿಸಿದ ಬಳಿಕ ವೈರ್‌ ಅಳವಡಿಸಿಸುರಕ್ಷಿತವಾಗಿ ಬಾಂಬ್ ಸ್ಫೋಟಿಸುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು. ಮೊದಲ ಹಂತದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು ನಡೆದ ಯತ್ನ ವಿಫಲವಾದ ಹಿನ್ನೆಲೆಯಲ್ಲಿ, ಹೊಸ ಕೇಬಲ್ ಅಳವಡಿಕೆ ಮಾಡಲಾಯಿತು. 2ನೇ ಹಂತದ ಪ್ರಯತ್ನದಲ್ಲಿ ಬಾಂಬ್ ಸ್ಫೋಟಿಸಲು ಸಾಧ್ಯವಾಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.