ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಭಾನುವಾರಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಮುಧೋಳ ತಳಿ ನಾಯಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಆಕಾಶವಾಣಿ ಮೂಲಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬಾಂಬ್ ಪತ್ತೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಮುಧೋಳ ತಳಿ ನಾಯಿಗಳು ಪೊಲೀಸರು, ರಕ್ಷಣಾ ಪಡೆಗೆ ಅತ್ಯಮೂಲ್ಯ ನೆರವು ನೀಡುತ್ತಿವೆ. ಈ ತಳಿಯ ನಾಯಿಗಳಿಗೆ ತರಬೇತಿ ನೀಡಿ ಸಿಐಎಸ್ಎಫ್, ಸೇನೆ, ಎನ್‌ಎಸ್‌ಜಿ ಪಡೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಮುಧೋಳ ತಳಿ, ರಾಜಪಾಳ್ಯಂ ತಳಿ ಸೇರಿದಂತೆ ದೇಸಿ ಶ್ವಾನ ತಳಿಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ’ಎಂದು ಹೇಳಿದ್ದಾರೆ.
ಮುಧೋಳ ದ ಮಹಾರಾಜ ಮಾಳೋಜಿರಾವ್ ಘೋರ್ಪಡೆ ಪರ್ಶಿಯನ್ ಹಾಗೂ ಸ್ಥಳೀಯ ನಾಯಿ ತಳಿಗಳ ಸಂಕರದ ಮೂಲಕ ಮುಧೋಳ ನಾಯಿ ತಳಿಗಳ ಅಭಿವೃದ್ಧಿ ಗೆ ಒತ್ತು ನೀಡಿದ್ದರು. ಮುಧೋಳ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶ್ವಾನ ಸಂಶೋಧನೆ ಕೇಂದ್ರ ಸ್ಥಾಪಿಸಲಾಗಿದ್ದು, ಇಲ್ಲಿ ತಳಿಗಳ ವಂಶಾಭಿವೃದ್ಧಿ ಕೈಗೊಳ್ಳಲಾಗುತ್ತಿದೆ.
ಈವರೆಗೆ ಸೇನೆ-ಅರೆಸೇನಾಪಡೆಗಳು 20 ನಾಯಿಗಳನ್ನು ತರಬೇತಿಗಾಗಿ ಪಡೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.