ADVERTISEMENT

ರಾಯರಿಗೆ ‘ನಾದಹಾರ’ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:23 IST
Last Updated 13 ಮಾರ್ಚ್ 2019, 20:23 IST
ಚೆನ್ನೈನ ಕಲಾವಿದರು ಗಾಯನ ಮಾಡಿ ನಾದಹಾರ ಸಮರ್ಪಿಸಿದರು
ಚೆನ್ನೈನ ಕಲಾವಿದರು ಗಾಯನ ಮಾಡಿ ನಾದಹಾರ ಸಮರ್ಪಿಸಿದರು   

ರಾಯಚೂರು: ಶ್ರೀ ರಾಘವೇಂದ್ರ ಸ್ವಾಮಿಗಳ 424ನೇ ಜನ್ಮದಿನದ ನಿಮಿತ್ತ ಮಂತ್ರಾಲಯದಲ್ಲಿ ಬುಧವಾರ ವರ್ಧಂತಿ ಉತ್ಸವ ಸಂಭ್ರಮ, ಸಡಗರದೊಂದಿಗೆ ನೆರವೇರಿಸಲಾಯಿತು.

ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಮಹಾಭಿಷೇಕ ಮತ್ತು ವೈವಿಧ್ಯಮಯ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಿದರು. ತಿರುಪತಿಯಿಂದ ತರಲಾಗಿದ್ದ ತಿರುಮಲ ವೆಂಕಟೇಶ್ವರ ದೇವರ ಶೇಷವಸ್ತ್ರವನ್ನು ವಾದ್ಯ ವೈಭವದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀ ಸುಬುಧೇಂದ್ರ ತೀರ್ಥರು ಮಠದ ಮಹಾದ್ವಾರದಲ್ಲಿ ಶೇಷವಸ್ತ್ರವನ್ನು ಶಿರದ ಮೇಲಿಟ್ಟುಕೊಂಡು ಸಂಚರಿಸಿದರು.

ಚೆನ್ನೈನಿಂದ ಬಂದ 400ಕ್ಕೂ ಹೆಚ್ಚು ವಾದ್ಯ ಕಲಾವಿದರು ಮಠದ ಪ್ರಾಕಾರದಲ್ಲಿ ಆಸೀನರಾಗಿ ನಿರಂತರವಾಗಿ ಗಾಯನ ಮತ್ತು ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿದರು. ರಾಯರಿಗೆ ನಾದಹಾರ ಸಮರ್ಪಣೆ ಮಾಡಿದರು.ವಯೊಲಿನ್, ಘಟಂ, ಮೃದಂಗ, ಕೊಳಲು, ಹಾರ್ಮೊನಿಯಂ ಸೇರಿದಂತೆ ನಾನಾ ವಿಧದ ವಾದ್ಯನಾದವು ಭಕ್ತ ಸಮೂಹದ ಮನಸೂರೆಗೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.