ADVERTISEMENT

‘ಮೈಕ್ರೊ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕೆ ಕಾನೂನು ತನ್ನಿ’; ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 15:38 IST
Last Updated 24 ಜನವರಿ 2025, 15:38 IST
ಮೈಕ್ರೊಫೈನಾನ್ಸ್‌ ಅಕ್ರಮ ವಿರೋಧಿ ಮಹಿಳೆಯರ ವೇದಿಕೆಯ ಸದಸ್ಯರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು
ಮೈಕ್ರೊಫೈನಾನ್ಸ್‌ ಅಕ್ರಮ ವಿರೋಧಿ ಮಹಿಳೆಯರ ವೇದಿಕೆಯ ಸದಸ್ಯರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದರು   

ಬೆಂಗಳೂರು: ‘ಮೈಕ್ರೊಫೈನಾನ್ಸ್‌ ಸಂಸ್ಥೆಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಕಾನೂನು ರೂಪಿಸಬೇಕು’ ಎಂದು ಒತ್ತಾಯಿಸಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ‘ಮೈಕ್ರೊಫೈನಾನ್ಸ್‌ ಅಕ್ರಮ ವಿರೋಧಿ ಮಹಿಳೆಯರ ವೇದಿಕೆ’ ಮನವಿ ಸಲ್ಲಿಸಿದೆ.

‘ಮೈಕ್ರೊಫೈನಾನ್ಸ್‌ಗಳ ನಿಯಂತ್ರಣಕ್ಕೆ ಅಗತ್ಯ ಕಾನೂನನ್ನು ಜಾರಿಗೆ ತರುವುದಾಗಿ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಹೇಳಿದ್ದೀರಿ. ರಾಜ್ಯದ ಎಲ್ಲ ಗ್ರಾಮೀಣ ಭಾಗದಲ್ಲೂ ಈ ಸಮಸ್ಯೆ ಬಿಗಡಾಯಿಸಿದೆ. ಸುಲಭಕ್ಕೆ ಸಾಲ ನೀಡುವ ನೆವದಲ್ಲಿ ಮಹಿಳೆಯರನ್ನು ಅತೀವ ಬಡ್ಡಿಯ ಸಾಲಕ್ಕೆ ಸಿಲುಕಿಸಲಾಗುತ್ತಿದೆ. ಇದರ ಮೇಲೆ ನಿಯಂತ್ರಣ ಹೇರಬೇಕು’ ಎಂದು ವೇದಿಕೆಯ ವಿ.ಗಾಯತ್ರಿ ಕೋರಿದ್ದಾರೆ.

ಮೈಕ್ರೊಫೈನಾನ್ಸ್‌ಗಳ ಹಾವಳಿಯ ಬಗ್ಗೆ ಜನವಾದಿ ಮಹಿಳಾ ಸಂಘಟನೆ, ಜಾಗೃತಿ ಸಂಸ್ಥೆ ಮತ್ತು ಆರ್‌ಎಲ್‌ಎಚ್‌ಪಿ ನಡೆಸಿರುವ ಸಮೀಕ್ಷಾ ವರದಿಗಳ ಪ್ರತಿಗಳನ್ನು ವೇದಿಕೆಯು ಸಲ್ಲಿಸಿದೆ.

ADVERTISEMENT

ಅದನ್ನು ಸ್ವೀಕರಿಸಿದ ಸಚಿವರು, ‘ಮನವಿಯಲ್ಲಿನ ಅಂಶಗಳನ್ನು ಪರಿಶೀಲಿಸಿ’ ಎಂದು ಹಣಕಾಸು ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.