ADVERTISEMENT

ಡ್ರಗ್ ಮಾಫಿಯಾ | ರಾಜಕಾರಣಿಗಳ ಮಕ್ಕಳ ಮಾಹಿತಿಯೂ ಹೊರ ಬರಲಿ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 11:24 IST
Last Updated 4 ಸೆಪ್ಟೆಂಬರ್ 2020, 11:24 IST
ವಸತಿ ಸಚಿವ ವಿ.ಸೋಮಣ್ಣ
ವಸತಿ ಸಚಿವ ವಿ.ಸೋಮಣ್ಣ    

ಬೆಂಗಳೂರು: ಡ್ರಗ್ಸ್‌ ದಂಧೆಯಲ್ಲಿ ರಾಜಕಾರಣಿಗಳ ಮಕ್ಕಳು ಇದ್ದರೆ, ಆ ಮಾಹಿತಿಯನ್ನೂ ಬಹಿರಂಗಪಡಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರೆಲ್ಲಾ ಹಲ್ಕಾ ಕೆಲಸ ಮಾಡಿದ್ದಾರೋ ಅವೆಲ್ಲ ಹೊರಗೆ ಬರಬೇಕು. ಅದರಲ್ಲಿ ಯಾವುದೇ ಮುಚ್ಚು ಮರೆ ಬೇಕಿಲ್ಲ ಎಂದು ಹೇಳಿದರು.

ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ಈಗಿನ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಹಿಂದೆ ಎಂ.ಬಿ.ಪಾಟೀಲ ಅವರೂ ಗೃಹ ಸಚಿವರು ಆಗಿದ್ದರು. ಅವರಲ್ಲಿ ಈ ವಿಷಯವಾಗಿ ಮಾಹಿತಿ ಇದ್ದರೆ ಸರ್ಕಾರಕ್ಕೆ ನೀಡಲಿ ಎಂದು ಹೇಳಿದ್ದಾರೆ.

ADVERTISEMENT

ಪೊಲೀಸ್‌ ಇಲಾಖೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸಿನಿಮಾರಂಗ ಮಾತ್ರವಲ್ಲ, ಯಾವುದೇ ರಂಗದಲ್ಲಿ ಈ ವ್ಯವಸ್ಥೆ ಇದ್ದರೂ ಸತ್ಯಾಂಶ ಹೊರಗೆ ಬರಬೇಕು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲಿಗೆ ಹೋಗಿ ತಲುಪುತ್ತದೆಯೋ ನೋಡೋಣ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.