ADVERTISEMENT

ಕಾರು ಪಲ್ಟಿ: ಎಂಎಲ್‌ಸಿ ಘೊಟ್ನೇಕರ ಅಪಾಯದಿಂದ ಪಾರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 11:25 IST
Last Updated 3 ಜನವರಿ 2019, 11:25 IST
ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಕಾರು ಗುರುವಾರ ಪಲ್ಟಿಯಾಗಿರುವುದು
ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರ ಕಾರು ಗುರುವಾರ ಪಲ್ಟಿಯಾಗಿರುವುದು   

ಹಳಿಯಾಳ:ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರು ಗುರುವಾರ ಪಲ್ಟಿಯಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರೊಂದಿಗೆ ಇದ್ದ ಹಳಿಯಾಳಪುರಸಭೆ ಸದಸ್ಯ ಅನಿಲ ಚವ್ಹಾಣಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅವರು ಹಳಿಯಾಳದಿಂದ ಶಿರಸಿಗೆ ತೆರಳುತ್ತಿರುವ ವೇಳೆರಾಜ್ಯ ಹೆದ್ದಾರಿಯ ತಾಟವಾಳ ಸಮೀಪ ಈ ಅವಘಡ ನಡೆದಿದೆ. ಎದುರಿನಿಂದ ಬರುತ್ತಿದ್ದ ಇಂಡಿಗೋಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಮುಂದಾದಾಗ ಫಾರ್ಚುನರ್ ಪಲ್ಟಿಯಾಗಿದೆ ಎನ್ನಲಾಗಿದೆ. ಇಂಡಿಗೋ ಕಾರಿನ ಮುಂಭಾಗ ಜಖಂಗೊಂಡಿದೆ.

ಘೊಟ್ನೇಕರ ಅವರು ಕಾರಿನ ಎಡಬದಿಯಲ್ಲಿ ಕುಳಿತಿದ್ದರು. ಆ ಬದಿಯೇ ಕಾರು ಉರುಳಿದೆ. ಅದರಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ADVERTISEMENT
ಎಸ್.ಎಲ್.ಘೊಟ್ನೇಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.