ADVERTISEMENT

ಜೆಡಿಎಸ್‌ನ ಇನ್ನಷ್ಟು ನಾಯಕರು ಕಾಂಗ್ರೆಸ್‌ಗೆ: ಮಧು ಬಂಗಾರಪ್ಪ

ಮುಖಂಡ ಮಧು ಬಂಗಾರಪ್ಪ ಸುಳಿವು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 2:30 IST
Last Updated 26 ಮಾರ್ಚ್ 2021, 2:30 IST
ತುಮಕೂರಿನ ಜಿ.ಪಂ ಮಾಜಿ ಸದಸ್ಯ ಟಿ.ಎಚ್.ಕೃಷ್ಣಪ್ಪ ಮನೆಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಭೇಟಿ ನೀಡಿದ್ದರು
ತುಮಕೂರಿನ ಜಿ.ಪಂ ಮಾಜಿ ಸದಸ್ಯ ಟಿ.ಎಚ್.ಕೃಷ್ಣಪ್ಪ ಮನೆಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಭೇಟಿ ನೀಡಿದ್ದರು   

ತುಮಕೂರು: ಜಿಲ್ಲೆಯ ಜೆಡಿಎಸ್‍ ಶಾಸಕರು, ಮಾಜಿ ಶಾಸಕರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

ನಗರದ ಹೊರವಲಯದ ಭೀಮಸಂದ್ರದಲ್ಲಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಎಚ್.ಕೃಷ್ಣಪ್ಪ ಅವರ ಮನೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಈಗಿನ ಪರಿಸ್ಥಿತಿಯಲ್ಲಿ ಶಾಸಕರು ಪಕ್ಷ ಬದಲಾಯಿಸಿದರೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಹೆಚ್ಚು ಚರ್ಚಿಸುವುದಿಲ್ಲ. ನಿರಂತರವಾಗಿ ಅವರ ಸಂಪರ್ಕದಲ್ಲಿ ಇದ್ದೇನೆ. ಪಕ್ಷಕ್ಕೆ ಬಂದಾಗ ಸ್ವಾಗತಿಸಲು ಸಜ್ಜಾಗಿದ್ದೇನೆ. ಟಿ.ಎಚ್.ಕೃಷ್ಣಪ್ಪ ಅವರನ್ನು ಒಂದೇ ಪಕ್ಷದಲ್ಲಿ ಜತೆ ಯಲ್ಲಿರೋಣ ಎಂದು ಕರೆದಿದ್ದೇನೆ. ಮುಂದೆ ನಿರ್ಧಾರ ಕೈಗೊಳ್ಳುತ್ತಾರೆ’ ಎಂದರು.

ADVERTISEMENT

ಟಿಕಾಯತ್ ವಿರುದ್ಧ ಕೇಸು– ಖಂಡನೆ

ರೈತ ನಾಯಕ ರಾಕೇಶ್ ಟಿಕಾಯತ್ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಭಾಷಣ ಮಾಡಿದ್ದು, ಶಿವಮೊಗ್ಗ, ಹಾವೇರಿಯಲ್ಲಿ ಪ್ರಕರಣ ದಾಖಲಿಸಿರುವ ಕ್ರಮ ಖಂಡನೀಯ. ಬಿಜೆಪಿ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಅನ್ನದಾತರ ಮೇಲೆ ದಾಖಲಿಸಿರುವ ಕೇಸು ಹಿಂಪಡೆಯಬೇಕು ಎಂದರು.

ರೈತರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕಾದ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಹಕ್ಕುಗಳನ್ನು ಕಸಿದುಕೊಂಡಿವೆ. ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ ಎಂದು ಟೀಕಿಸಿದರು.

ಬಿಜೆಪಿಯವರಿಗೆಮಾನ ಮರ್ಯಾದೆ ಏನೂ ಇಲ್ಲ

ಸಚಿವ ಡಾ.ಸುಧಾಕರ್ ಅವರ ‘ಏಕಪತ್ನಿ ವ್ರತಸ್ಥ’ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲಿ ಇಂತಹ ಅಸಹ್ಯ ಹುಟ್ಟಿಸುವ ಮಾತುಗಳನ್ನಾಡುವುದು ಸರಿಯಲ್ಲ. ಬಿಜೆಪಿಯವರಿಗೆಮಾನ ಮರ್ಯಾದೆ ಏನೂ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.