ADVERTISEMENT

ಮೈಸೂರು ಅತ್ಯಾಚಾರ ಪ್ರಕರಣ: ಮತ್ತೊಬ್ಬ ಆರೋಪಿಗಾಗಿ ತಮಿಳುನಾಡಲ್ಲಿ ಪೊಲೀಸರ ಅಲೆದಾಟ

ಅತ್ಯಾಚಾರ ಪ್ರಕರಣ: ಒಂದು ವಾರದಿಂದ ಆರೋಪಿಗಾಗಿ ನಿಲ್ಲದ ಶೋಧ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 2:35 IST
Last Updated 4 ಸೆಪ್ಟೆಂಬರ್ 2021, 2:35 IST
   

ಮೈಸೂರು: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಾಗಿ ಪೊಲೀಸರು ತಮಿಳುನಾಡಿನಲ್ಲಿ ನಿರಂತರ ಹುಡುಕಾಟ ನಡೆಸಿದ್ದಾರೆ.

ತಾಳವಾಡಿ ಸಮೀಪದ ಗ್ರಾಮದಲ್ಲಿ ಅಡಗಿದ್ದ ಆತನನ್ನು ಹಿಡಿಯಲು ಸ್ಥಳಕ್ಕೆ ತೆರಳಿದಾಗ ಮನೆ ಖಾಲಿ ಮಾಡಿದ್ದ. ತಿರ್‌ಪುರ್‌ ಜಿಲ್ಲೆಯ ಗ್ರಾಮವೊಂದ ರಲ್ಲಿರುವ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಅಲ್ಲೂ ಖಾಲಿ ಮನೆಯೇ ಕಂಡುಬಂದಿದೆ. ಆರೋಪಿಯು ತನ್ನ ಮೊಬೈಲ್‌ ಫೋನ್ ಬಂದ್‌ ಮಾಡಿಕೊಂಡು, ದಾರಿಹೋಕರ ಫೋನ್ ಬಳಸಿ ಸ್ನೇಹಿತರನ್ನು ಸಂಪರ್ಕಿಸುತ್ತಿರುವುದು ಪೊಲೀಸರನ್ನು ಮತ್ತಷ್ಟು ಪೇಚಿಗೆ ನೂಕಿದೆ. ಆತನ ಪತ್ತೆಗೆ ತಮಿಳುನಾಡು ಪೊಲೀಸರೂ ಕೈಜೋಡಿಸಿದ್ದು, 2 ತಂಡಗಳಲ್ಲಿ ಅವರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಲವು ಸರಗಳ್ಳತನ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದಾನೆ ಎಂದು ತಂಡದ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹಗಲಿನಲ್ಲಿ ಮಾಹಿತಿ ಕಲೆ ಹಾಕುವುದು ಹಾಗೂ ರಾತ್ರಿ ಕಾರ್ಯಾ ಚರಣೆ ಕೆಲಸ ನಿರಂತರವಾಗಿ ಸಾಗಿದೆ’ ಎಂದು ಮತ್ತೊಬ್ಬ ಸಿಬ್ಬಂದಿ ತಿಳಿಸಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.