ADVERTISEMENT

ಪೀರನವಾಡಿಯಲ್ಲಿ ಪ್ರತಿಮೆ ಇರುವ ಸ್ಥಳಕ್ಕೆ ರಾಯಣ್ಣನ ಹೆಸರನ್ನೇ ಇಡಬೇಕು: ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 10:29 IST
Last Updated 31 ಆಗಸ್ಟ್ 2020, 10:29 IST
ಟಿ.ಎ ನಾರಾಯಣಗೌಡ
ಟಿ.ಎ ನಾರಾಯಣಗೌಡ    

ಬೆಳಗಾವಿ: ‘ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಿರುವ ಜಾಗಕ್ಕೆ ಬೇರೊಬ್ಬರ ಹೆಸರಿಡುವುದು ಬೇಡ. ಅಲ್ಲಿಗೆ ರಾಯಣ್ಣ ವೃತ್ತ ಎಂದೇ ನಾಮಕರಣ ಮಾಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಆಗ್ರಹಿಸಿದರು.

ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಜಿಲ್ಲಾಡಳಿತವೇ ಮತ್ತೆ ವಿವಾದ ಸೃಷ್ಟಿಸಬಾರದು. ವಿವಾದ ಶಾಶ್ವತವಾಗಿ ಉಳಿಯುವಂತೆಯೂ ಮಾಡಬಾರದು. ಆಯಾ ಪ್ರತಿಮೆಗಳ ಹೆಸರನ್ನೇ ವೃತ್ತಕ್ಕೆ ಇಡಬೇಕು. ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅಥವಾ ಶಿವಸೇನೆಯವರ ಮಾತಿಗೆ ಮನ್ನಣೆ ಕೊಡಬಾರದು’ ಎಂದು ಒತ್ತಾಯಿಸಿದರು. ‘ಈ ಬಗ್ಗೆ ಮುಖ್ಯಮಂತ್ರಿಗೂ ಪತ್ರ ಬರೆಯುತ್ತೇನೆ. ಸ್ಪಂದನೆ ಸಿಗದಿದ್ದಲ್ಲಿ ಮುಂದೇನು ಮಾಡಬೇಕು ಎನ್ನುವುದು ಗೊತ್ತಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.