ADVERTISEMENT

ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿ

70ನೇ ಜಯಂತಿ: ಫೆ.21ರಂದು ಗದುಗಿನಲ್ಲಿ ಭಾವೈಕ್ಯ ಯಾತ್ರೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 18:20 IST
Last Updated 19 ಫೆಬ್ರುವರಿ 2019, 18:20 IST
ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ
ಲಿಂಗೈಕ್ಯ ಸಿದ್ಧಲಿಂಗ ಸ್ವಾಮೀಜಿ   

ಗದಗ: ಗದುಗಿನ ತೋಂಟದಾರ್ಯ ಮಠದ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥ, ಪ್ರತಿವರ್ಷ ವಿಜಯ ದಶಮಿಯಂದು ಬಸವ ತತ್ವ ಸಾಧಕರಿಗೆ ₹5 ಲಕ್ಷ ಮೊತ್ತದ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ಪ್ರೊ. ಎಸ್‌.ಎಸ್‌. ಪಟ್ಟಣಶೆಟ್ಟಿ ಹೇಳಿದರು.

ರಾಜ್ಯ ಸರ್ಕಾರ 2009ರಲ್ಲಿ ಶ್ರೀಗಳಿಗೆ ನೀಡಿದ್ದ ರಾಷ್ಟ್ರೀಯ ಬಸವ ಪುರಸ್ಕಾರದ ಪ್ರಶಸ್ತಿ ಮೊತ್ತವಾದ ₹10 ಲಕ್ಷವನ್ನು ಈ ಪ್ರಶಸ್ತಿ ನಿಧಿಗೇ ವರ್ಗಾಯಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಿದ್ಧಲಿಂಗ ಶ್ರೀಗಳ 70ನೇ ವರ್ಷದ ಜಯಂತಿಯನ್ನು ಭಾವೈಕ್ಯ ದಿನವನ್ನಾಗಿ ಫೆ.21ರಂದು ಆಚರಿಸಲಾಗುತ್ತಿದ್ದು, ಅಂದು ನಗರದಲ್ಲಿ ಭಾವೈಕ್ಯ ಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.