ADVERTISEMENT

ಹೊಸ ವರ್ಷಾಚರಣೆ: ಪಿಜಿಗಳಲ್ಲೂ ಕಠಿಣ ನಿಯಮ; ಪಾರ್ಟಿಗೆ ಮುನ್ನ ತಿಳಿದಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2025, 9:17 IST
Last Updated 31 ಡಿಸೆಂಬರ್ 2025, 9:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೃಪೆ: ಎಐ

ಬೆಂಗಳೂರು: ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ನಗರದಲ್ಲಿ ಹೊಸ ವರ್ಷದ ಆಚರಣೆ ವೇಳೆ ಯಾವುದೇ ರೀತಿಯ ಅವಘಡಗಳು ಉಂಟಾಗದಂತೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡಿದ್ದಾರೆ. ಈ ನಡುವೆ ಪೇಯಿಂಗ್ ಗೆಸ್ಟ್‌ಗಳಲ್ಲಿ ಕೂಡ ಕಠಿಣ ರೂಲ್ಸ್ ಜಾರಿಗೆ ತಂದಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್‌ (ಪಿಜಿ) ಗಳಲ್ಲಿ ವಾಸಿಸುವ ಯುವಕ–ಯುವತಿಯರಿಗೆ ಪಿಜಿ ಮಾಲೀಕರು ಕಠಿಣ ನಿಯಮಗಳು ಜಾರಿಗೊಳಿಸಿದ್ದಾರೆ. ಅನೇಕ ಪಿಜಿ ಯುವಕ ಯುವತಿಯರು ಹೊಸ ವರ್ಷದ ಪಾರ್ಟಿಗೆ ಸಿದ್ಧತೆ ಮಾಡಿಕೊಂಡಿದ್ದರೆ, ಅವರ ಪ್ಲಾನ್‌ಗಳು ಉಲ್ಟಾ ಆಗುವುದು ಖಚಿತ.

ಪಿಜಿಯಲ್ಲಿ ಇರುವವರು ಇಂದು ರಾತ್ರಿ 12 ಗಂಟೆಯ ನಂತರ ಪಿಜಿಗೆ ಬರುವಂತಿಲ್ಲ. ಸ್ನೇಹಿತರನ್ನು ಕರೆದುಕೊಂಡು ಬರುವಂತಿಲ್ಲ. ಪಿಜಿ ಒಳಗೆ ಪಾರ್ಟಿ ಮಾಡಲು ಅವಕಾಶವಿಲ್ಲ ಸೇರಿ ಇಂತಹ ಕಠಿಣ ನಿಯಮಗಳನ್ನು ಪಿಜಿ ಮಾಲೀಕರು ಹೇರಿದ್ದಾರೆ.

ಪಿಜಿ ಮಾಲೀಕರ ಕಠಿಣ ನಿಯಮಗಳು

  • ರಾತ್ರಿ 12 ಗಂಟೆಯ ನಂತರ ಪಿಜಿಗೆ ಬರುವಂತಿಲ್ಲ.

  • ತಡರಾತ್ರಿ ಬಂದರೆ ಬಾಗಿಲು ತೆರೆಯುವುದಿಲ್ಲ.

  • ಕುಣಿದಾಡುವುದು, ಸಂಗೀತದೊಂದಿಗೆ ಸಂಭ್ರಮ ಸಂತೋಷಕ್ಕೆ ನಿರ್ಬಂಧ.

  • ಕುಡಿದು ಪಿಜಿ ಒಳಗೆ ಬಂದರೆ ನೋ ಎಂಟ್ರಿ. ಮದ್ಯ ಸೇವಿಸಿ ತೊಂದರೆ ಕೊಡುವವರಿಗೆ ಕಠಿಣ ಕ್ರಮ.

  • ಪಾರ್ಟಿ ಮಾಡಲು ಹೊರಗೆ ಹೋದರೆ ರಾತ್ರಿ 12 ಗಂಟೆಗೆ ಮುಂಚೆಯೇ ಪಿಜಿಗೆ ಮರಳಬೇಕು.

  • ಸ್ನೇಹಿತರನ್ನು ಕರೆದುಕೊಂಡು ಪಿಜಿಗೆ ಬರುವಂತಿಲ್ಲ.

  • ಹೊರಗಿನವರಿಗೆ ಪ್ರವೇಶ ನಿಷೇಧ.

  • ಪಿಜಿ ಒಳಗೆ ಅಥವಾ ಟೆರೆಸ್‌ನಲ್ಲಿ ಪಾರ್ಟಿ ಮಾಡಲು ಅವಕಾಶವಿಲ್ಲ.

ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು, ಹುಬ್ಬಳಿ ಸೇರಿದಂತೆ ರಾಜ್ಯದ ಬಹುತೇಕ ಪಿಜಿ ಮಾಲೀಕರು ಈ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.