ADVERTISEMENT

ನ್ಯೂಸ್​ಫಸ್ಟ್​​​ನಲ್ಲಿ ಸುದ್ದಿ ನಿರೂಪಣೆ ಮಾಡಿದ AI ಆ್ಯಂಕರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2023, 15:36 IST
Last Updated 13 ಜುಲೈ 2023, 15:36 IST
   

ಬೆಂಗಳೂರು: ಕನ್ನಡದ ಸುದ್ದಿ ವಾಹಿನಿ ನ್ಯೂಸ್‌ಫಸ್ಟ್‌ ಎಐ ತಂತ್ರಜ್ಞಾನ ಅಳವಡಿಸಿಕೊಂಡಿದೆ. ‘AI ಮಾಯಾ‘ ಎನ್ನುವ ನ್ಯೂಸ್‌ ಆ್ಯಂಕರ್ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ ಸುದ್ದಿ ವಾಚನ ಮಾಡಿದೆ. ಆ ಮೂಲಕ ಕನ್ನಡದಲ್ಲಿ ಈ ತಂತ್ರಜ್ಞಾನ ಬಳಸಿಕೊಂಡ ಮೊದಲ ಸುದ್ದಿವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

AI ಮಾಯಾಗೆ ಸಾಮಾನ್ಯ ಸುದ್ದಿ ನಿರೂಪಕರ ರೀತಿಯೇ ಎಲ್ಲವನ್ನೂ ಪ್ರಸ್ತುತ ಪಡಿಸುವ ಸಾಮರ್ಥ್ಯವಿದೆ. ಸಂದರ್ಶನ, ಚರ್ಚೆ, ವಿಶೇಷ ವರದಿಗಳು ಮುಂತಾದ ಯಾವುದೇ ಪ್ರಕಾರದ ನಿರೂಪಣೆಯನ್ನು ಮಾಡುವ ಸಾಮರ್ಥ್ಯ ಈ ಆರ್ಟಿಫಿಶಿಯಲ್​ ಇಂಟಲಿಜೆನ್ಸ್​ ಆ್ಯಂಕರ್​ ಮಾಯಾಗೆ ಇದೆ.

‘ಸುಮಾರು ಮೂರು ತಿಂಗಳ ನಿರಂತರ ಪ್ರಯತ್ನದ ನಂತರ, ಭಾಷೆ, ನಿರೂಪಣೆ ಶೈಲಿ, ತಾಂತ್ರಿಕ ದೋಷಗಳು ಇವೆಲ್ಲವನ್ನು ಸರಿಪಡಿಸಿಕೊಂಡು AI ಮಾಯಾಗೆ ಒಂದು ಸ್ಪಷ್ಟ ರೂಪ ಪಡೆದುಕೊಳ್ಳಲು ಸಾಧ್ಯವಾಗಿದೆ. ಮಾಯ ಸದ್ಯ ಲಿಪಿ ಇರುವ ವಿಶ್ವದ ಯಾವುದೇ ಭಾಷೆಯಲ್ಲಿ ಸುದ್ದಿ ನಿರೂಪಣೆ ಮಾಡುವ ಸಾಮರ್ಥ್ಯವಿದೆ.

ADVERTISEMENT

‘ನ್ಯೂಸ್​ಫಸ್ಟ್​ನಲ್ಲಿ ಕನ್ನಡದಲ್ಲಿ ಸುದ್ದಿ ಪ್ರಸ್ತುತಿ ಮಾಡಲಿದ್ದಾಳೆ. ನ್ಯೂಸ್​ಫಸ್ಟ್​ ಡಿಜಿಟಲ್​ ಮಾಧ್ಯಮದಲ್ಲಿ ಇಂಗ್ಲೀಷ್​ನಲ್ಲಿಯೂ ಸದ್ಯದಲ್ಲೇ ಸುದ್ದಿ ನಿರೂಪಣೆಗೂ ಮಾಯಾ ಸಿದ್ದಳಾಗಿದ್ದಾಳೆ’ ಎಂದು ಚಾನೆಲ್ ‍ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ಕಾರ್ಯಕ್ರಮಗಳಲ್ಲಿ ಹೊಸತನ, ಹೊಸ ರೀತಿಯ ನಿರೂಪಣೆ, ಗ್ರಾಫಿಕ್ಸ್ ಸಾಫ್ಟ್​ವೇರ್​​, ಬ್ರಾಡಕಾಸ್ಟಿಂಗ್ ತಂತ್ರಜ್ಞಾನ, ​ ಸೇರಿದಂತೆ ಯಾವುದೇ ರೀತಿಯ ಹೊಸತನಗಳನ್ನ ಅಳವಡಿಸಿಕೊಳ್ಳುವಲ್ಲಿ ನಮ್ಮ ವಾಹಿನಿ ಸದಾ ಎಲ್ಲರಿಗಿಂತ ಮುಂದಿದೆ.
– ಎಸ್​.ರವಿಕುಮಾರ್​. ಎಂಡಿ ಮತ್ತು ಸಿಇಒ ನ್ಯೂಸ್​ಫಸ್ಟ್​ ಕನ್ನಡ

ಬುಧವಾರ ರಾತ್ರಿ 8 ಗಂಟೆಗೆ ನ್ಯೂಸ್​​ಫಸ್ಟ್​ನ ಪ್ರೈಂ ಟೈಮ್​ ಸುದ್ದಿ ಇಂಡಿಯಾಫಸ್ಟ್ ನಲ್ಲಿ ಎಐ ಮಾಯಾ ತನ್ನ ಮೊದಲ ಸುದ್ದಿ ನಿರೂಪಣೆ ಮಾಡಿದ್ದಾಳೆ. ಇನ್ಮುಂದೆ ಪ್ರತಿದಿನ ನ್ಯೂಸ್​ಫಸ್ಟ್​ ವಾಹಿನಿಯಲ್ಲಿ ಮಾಯಾ ಸುದ್ದಿ ನಿರೂಪಣೆ ಮಾಡಲಿದ್ದಾಳೆ.

ಸುದ್ದಿವಾಹಿನಿಯ ವೀಕ್ಷಕರಿಗೆ ಅತ್ಯುತ್ತಮ ಅವಕಾಶವೊಂದನ್ನು ನ್ಯೂಸ್​ಫಸ್ಟ್​ ಒದಗಿಸಿಕೊಡುತ್ತಿದ್ದು, ಸುದ್ದಿ ಕುರಿತ ವಿಕ್ಷಕರು ಕೇಳುವ ಆಯ್ದ ಪ್ರಶ್ನೆಗಳಿಗೂ ಎಐ ಮಾಯಾ ಉತ್ತರಿಸಲಿದ್ದಾಳೆ. ಇದಕ್ಕಾಗಿಯೇ ವಾಟ್ಸಪ್​ ಹಾಗೂ ಇಮೇಲ್​ನಲ್ಲಿ ಪ್ರಶ್ನೆ ಕೇಳಲು ವೇದಿಕೆಯನ್ನೂ ಸಹ ವಾಹಿನಿ ಒದಗಿಸಿಕೊಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.