
ಬೆಳಗಾವಿ: 'ಸದನದಲ್ಲಿ ಅವಿಶ್ವಾಸ ಮಂಡನೆ ಮಾಡುವುದಾಗಿ ಬಿಜೆಪಿಯ ಕೆಲ ನಾಯಕರು ಗುಸುಗುಸು ಶುರು ಮಾಡಿದ್ದಾರೆ. ಆ ಪ್ರಯತ್ನಕ್ಕೆ ಕೈ ಹಾಕಿದೆ ಮುಖಭಂಗ ಎದುರಿಸುತ್ತಾರೆ. ಆ ಸಾಮರ್ಥ್ಯ ಅವರಿಗೆಲ್ಲಿದೆ' ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸರ್ಕಾರಕ್ಕೆ ಬಹುಮತವಿದೆ. ಅವರಿಗೆ ಗೊತ್ತು. ಬಹುಮತ ನಮ್ಮಲ್ಲೆ ಇದೆ ಎಂಬುದು. ಸುಮ್ಮನೇ ಸುಳ್ಳು ಹೇಳುತ್ತ ಹೋಗುತ್ತಿದ್ದಾರೆ' ಎಂದರು.
'ಜನರ ವಿಷಯಗಳನ್ನು ಚರ್ಚೆ ಮಾಡಲು ಅಧಿವೇಶನ ನಡೆಯುತ್ತಿದೆ. ಅದನ್ನ ಬಿಟ್ಟು ರಾಜಕೀಯ ಮಾಡಿದರೆ ಅನಗತ್ಯ ಖರ್ಚು ಮತ್ತು ಸಮಯ ವ್ಯರ್ಥವಾಗುತ್ತದೆ. ಪ್ರತಿಪಕ್ಷವಾಗಿ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಾರೋ ಅಥವಾ ವ್ಯರ್ಥ ಮಾಡಿಕೋಳ್ಳುತ್ತಾರೋ ಅವರೇ ನಿರ್ಧರಿಸಲಿ' ಎಂದರು.