ADVERTISEMENT

ಕೊಳ್ಳೇಗಾಲದ ಎಟಿಎಂನಲ್ಲಿ ಕನ್ನಡ ಮಾಯ!

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 4:10 IST
Last Updated 27 ಮಾರ್ಚ್ 2021, 4:10 IST
ಎಟಿಎಂನಲ್ಲಿ ಕನ್ನಡ ಮಾಯ
ಎಟಿಎಂನಲ್ಲಿ ಕನ್ನಡ ಮಾಯ   

ಕೊಳ್ಳೇಗಾಲ: ಇಲ್ಲಿನ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಎಟಿಎಂನ ಪರದೆಯಲ್ಲಿ ಇಂಗ್ಲಿಷ್‌, ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಮಾಹಿತಿ, ಸೂಚನೆಗಳು ಬರುತ್ತಿದ್ದು, ಕನ್ನಡ ಭಾಷೆಯಲ್ಲಿಲ್ಲ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗಿದೆ.

ಕನ್ನಡ ಭಾಷೆ ಇಲ್ಲದಿರುವುದರಿಂದ ಸ್ಥಳೀಯರಿಗೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಜನರಿಗೆ ಎಟಿಎಂ ಬಳಕೆಗೆ ಕಷ್ಟವಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿವೆ.

ಗ್ರಾಹಕರು ಹಲವು ಬಾರಿ ಈ ವಿಚಾರವನ್ನು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಜನರ ದೂರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.