ಬೆಂಗಳೂರು: ‘ಆಪರೇಷನ್ ಸಿಂಧೂರದಲ್ಲಿ ಪಾಕಿಸ್ತಾನವನ್ನು ಮಂಡಿಯೂರಿ ಕೂರಿಸಿದೆವು. ಆಪರೇಷನ್ ಸಿಂಧೂರ ಯಶಸ್ವಿಯಾಗುವಲ್ಲಿ ಬೆಂಗಳೂರಿನ ಜನರ ಕಂಪನಿಗಳ ಕೊಡುಗೆ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
‘ಬೆಂಗಳೂರು ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಇಂದು ವಿಶ್ವದಲ್ಲಿ ಬೆಂಗಳೂರು ಒಂದು ಮಹತ್ವದ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಇಲ್ಲಿನ ಜನರ ಶ್ರಮವೇ ಕಾರಣ’ ಎಂದರು.
‘ಇಂತಹ ಬೆಂಗಳೂರನ್ನು ಭವಿಷ್ಯದ ದಿನಗಳಿಗೆ ಸಿದ್ಧಪಡಿಸಬೇಕು. ಅದರ ಭಾಗವಾಗಿಯೇ ಮೆಟ್ರೊ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಜನರ ಸಮಯ ಮತ್ತು ಹಣ ಉಳಿತಾಯವಾಗಲಿದೆ. ವಾಯು–ಶಬ್ದ ಮಾಲಿನ್ಯವೂ ಇಳಿಕೆಯಾಗಲಿದೆ. ಈ ಯೋಜನೆಗೆ ಇನ್ಫೊಸಿಸ್ ಬಯೊಕಾನ್‌ನಂತಹ ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ಒದಗಿಸುವ ಮೂಲಕ ಅಭಿವೃದ್ಧಿ ಹೊಸ ಮಾದರಿಗೆ ನಾಂದಿ ಹಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.