ADVERTISEMENT

ಮೊಹಮ್ಮದ್ ಮಗನ ಹುಟ್ಟುಹಬ್ಬಕ್ಕೆ ಕಾಣಿಕೆ ನೀಡಿದ ಸಿಇಒ ಟಿ.ಭೂ ಬಾಲನ್

ಮಗನ ಹುಟ್ಟುಹಬ್ಬಕ್ಕೆ ಶಾಲೆಗೆ ಬಣ್ಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 14:56 IST
Last Updated 21 ಆಗಸ್ಟ್ 2020, 14:56 IST
ಮೊಹಮ್ಮದ್ ಹುಸೇನ್ ಆಗ್ರಾ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.
ಮೊಹಮ್ಮದ್ ಹುಸೇನ್ ಆಗ್ರಾ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.   

ಬಾಗಲಕೋಟೆ:ಮಗನ ಹುಟ್ಟು ಹಬ್ಬದ ನಿಮಿತ್ತ ಸ್ವಂತ ಖರ್ಚಿನಲ್ಲಿ ಸರ್ಕಾರಿ ಪ್ರೌಢಶಾಲೆಗೆ ಬಣ್ಣ ಹಚ್ಚಿಸಿದ ಇಳಕಲ್ ತಾಲ್ಲೂಕಿನ ಹಿರೇಸಿಂಗನಗುತ್ತಿಯ ಮೊಹಮ್ಮದ್ ಹುಸೇನ್ ಆಗ್ರಾ ಅವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶಾಲೆಯ ಡಿ ದರ್ಜೆ ನೌರರರಾಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್ ಅವರು ತಮ್ಮ ಮಗನ ಜನ್ಮ ದಿನವನ್ನು ಸ್ಮರಣೀಯವಾಗಿಸಲು ಶಾಲೆಯ ಕಟ್ಟಡಕ್ಕೆ ₹ 30 ಸಾವಿರ ಖರ್ಚು ಮಾಡಿ ಸುಣ್ಣ ಬಣ್ಣ ಹಚ್ಚಿಸಿದ್ದರು.

ಈ ಬಗ್ಹೆ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ವಿಶೇಷ ವರದಿ ಪ್ರಕಟಿಸಿತ್ತು.

ADVERTISEMENT

ವರದಿ ಗಮನಿಸಿ, ಸಚಿವ ಸುರೇಶ ಕುಮಾರ ಮೊಹಮ್ಮದ್ ಅವರಿಗೆ ಅಭನಂದನಾ ಪತ್ರ ಕಳುಹಿಸಿದ್ದಾರೆ. ಅವರ ಸಾಮಾಜಿಕ ಕಾಳಜಿಯನ್ನು ಅನುಕರಣೀಯವಾದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿಯನ್ನು ಬದಿಗಿಟ್ಟು ಇಂತಹ ಉದಾತ್ತವಾದ ಕೆಲಸವನ್ನು ಮಾಡಿರುವ ಅವರಂತಹ ವ್ಯಕ್ತಿಗಳ ಸಂಖ್ಯೆ ವೃದ್ಧಿಸಲಿ ಎಂದು ಹಾರೈಸಿದ್ದಾರೆ.

ಸಿಇಒ ಪ್ರಶಂಸನಾ ಪತ್ರ:ಮಗನ ಹುಟ್ಟು ಹಬ್ಬದ ನಿಮಿತ್ಯ ಸ್ವಂತ ಖರ್ಚಿನಲ್ಲಿ ಕಟ್ಟಡಕ್ಕೆ ಸುಣ್ಣ-ಬಣ್ಣವನ್ನು ಹಚ್ಚಿರುವ ಮೊಹಮ್ಮದ ಹುಸೇನ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಗೆ ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ ಶುಕ್ರವಾರ ಭೇಟಿ ನೀಡಿ ಅವರಿಗೆ ಪ್ರಶಂಸನಾ ಪತ್ರ ನೀಡಿದರು. ಅವರ ಕುಟುಂಬದವರನ್ನು ಗೌರವಿಸಿದರು. ಅಲ್ಲದೇ ಅವರ ಮಗನ ಹುಟ್ಟು ಹಬ್ಬದ ಉಡುಗರೆಯಾಗಿ ಶಾಲಾ ಬ್ಯಾಗ್ ಮತ್ತು ಸಮವಸ್ತ್ರ ನೀಡಿದರು.

ಇದೇ ಸಂದರ್ಭದಲ್ಲಿ ಹುನಗುಂದ ತಹಶೀಲ್ದಾರ್ಬಸವರಾಜ ನಾಗರಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.