ADVERTISEMENT

ಎಚ್‌ಡಿಕೆ ಭೇಟಿ ರಾಜಕೀಯ ಕಾರಣಕ್ಕೆ ಅಲ್ಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 14:30 IST
Last Updated 24 ಫೆಬ್ರುವರಿ 2026, 14:30 IST
ಪರಮೇಶ್ವರ
ಪರಮೇಶ್ವರ   

ಬೆಂಗಳೂರು: ‘ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಜಕೀಯ ಕಾರಣಕ್ಕೆ ನಾನು ಭೇಟಿ ಮಾಡಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಕುಮಾರಸ್ವಾಮಿ ಅವರನ್ನು ಫೆ. 21ರಂದು ಪರಮೇಶ್ವರ ರಹಸ್ಯವಾಗಿ ಭೇಟಿ ಮಾಡಿ ಕೆಲಹೊತ್ತು ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಕೈಗಾರಿಕೆ ಕುರಿತಂತೆ ಮಾತುಕತೆ ನಡೆಸಲು ಭೇಟಿ ಮಾಡಿದ್ದೆ. ಈ ಹಿಂದೆ ನಾವು ಒಟ್ಟಾಗಿ ಸರ್ಕಾರ ನಡೆಸಿದವರು. ಭೇಟಿ ಆಗಿರುವುದೇ ತಪ್ಪು ಎನ್ನುವುದು ಸರಿಯಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲೂ ನಮ್ಮ ಸಿದ್ಧಾಂತವನ್ನು ನಾವು ಕಾಪಾಡಿಕೊಂಡಿದ್ದೇವೆ. ಅವರ ಸಿದ್ಧಾಂತವನ್ನು ಅವರು ಕಾಪಾಡಿಕೊಂಡಿದ್ದರು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.