ADVERTISEMENT

ರಾಜ್ಯ ಪೊಲೀಸ್ ಇಲಾಖೆಯ ಪ್ರಭಾರ ಡಿಜಿಪಿಯಾಗಿ ಎಂ.ಎ. ಸಲೀಂ ನೇಮಕ

​ಪ್ರಜಾವಾಣಿ ವಾರ್ತೆ
Published 21 ಮೇ 2025, 12:43 IST
Last Updated 21 ಮೇ 2025, 12:43 IST
<div class="paragraphs"><p>ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಡಾ.ಎಂ.ಎ. ಸಲೀಂ (ಬಲಬದಿ) ಅವರು ಅಲೋಕ್‌ ಮೋಹನ್ ಅವರಿಂದ ಅಧಿಕಾರ ಸ್ವೀಕರಿಸಿದರು</p></div>

ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿ ಡಾ.ಎಂ.ಎ. ಸಲೀಂ (ಬಲಬದಿ) ಅವರು ಅಲೋಕ್‌ ಮೋಹನ್ ಅವರಿಂದ ಅಧಿಕಾರ ಸ್ವೀಕರಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ–ಐಜಿಪಿ) ಡಾ.ಎಂ.ಎ. ಸಲೀಂ ಅವರನ್ನು ಸರ್ಕಾರ ನೇಮಿಸಿದ್ದು, ನೃಪತುಂಗ ರಸ್ತೆಯಲ್ಲಿರುವ ಪೊಲೀಸ್‌ ಪಡೆಯ ಮುಖ್ಯಸ್ಥರ ಕಚೇರಿಯಲ್ಲಿ ಬುಧವಾರ ಸಂಜೆ ಅವರು ಅಧಿಕಾರ ಸ್ವೀಕರಿಸಿದರು.

ADVERTISEMENT

ಸಿಐಡಿಯ ಆರ್ಥಿಕ ಅಪರಾಧಗಳು ಹಾಗೂ ವಿಶೇಷ ಘಟಕಗಳು ವಿಭಾಗದ ಪೊಲೀಸ್ ನಿರ್ದೇಶಕರಾಗಿರುವ ಸಲೀಂ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.‌

ನಿವೃತ್ತ ಡಿಜಿ–ಐಜಿಪಿ ಅಲೋಕ್‌ ಮೋಹನ್‌ ಅವರಿಂದ 43ನೇ ಡಿಜಿಪಿಯಾಗಿ ಸಲೀಂ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಜರಿದ್ದು ಶುಭ ಹಾರೈಸಿದರು.

ನಂತರ ಮಾತನಾಡಿದ ಸಲೀಂ, ‘ಪೊಲೀಸ್‌ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ಅಪರಾಧ ಪ್ರಕರಣಗಳ ತನಿಖೆಯಲ್ಲಿ ನೊಂದ ವ್ಯಕ್ತಿಗಳನ್ನು ಕೇಂದ್ರೀಕರಿಸುವ ವ್ಯವಸ್ಥೆಯನ್ನು ಅನುಸರಿಸಲಾಗುವುದು’ ಎಂದು ಹೇಳಿದರು.

ವಯೋನಿವೃತ್ತಿಯಾದ ಅಲೋಕ್‌ ಮೋಹನ್‌ ಮಾತನಾಡಿ, ‘ನನ್ನ ಅವಧಿಯಲ್ಲಿ ನಕ್ಸಲರ ಶರಣಾಗತಿಗೆ ಪ್ರಯತ್ನಿಸಿದ್ದು ಯಶಸ್ವಿ ಆಯಿತು. ಪಾಸ್‌ಪೋರ್ಟ್‌ ಪರಿಶೀಲನೆ ಸರಳೀಕರಿಸಲಾಯಿತು’ ಎಂದು ಹೇಳಿದರು.

ಸೈಬರ್ ಅಪರಾಧ: ಪೊಲೀಸರಿಗೆ ತರಬೇತಿ

‘ಸೈಬರ್ ಅಪರಾಧ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯ ಪ್ರಕರಣಗಳಂತೆ ಆಗಿವೆ. ಅಪರಾಧ ಪ್ರಕರಣಗಳ ಪೈಕಿ ಸೈಬರ್‌ ಅಪರಾಧ ಪ್ರಕರಣಗಳ ಪ್ರಮಾಣ ಶೇ 12ರಷ್ಟಿದೆ. ಈ ಪ್ರಕರಣಗಳ ನಿಯಂತ್ರಣ ಪತ್ತೆ ಕಾರ್ಯಕ್ಕೆ 40 ಸಾವಿರ ಪೊಲೀಸರಿಗೆ ತರಬೇತಿ ನೀಡಲಾಗಿದೆ’ ಎಂದು ಸಲೀಂ ಹೇಳಿದರು.

‘ಸೈಬರ್‌ ಅಪರಾಧ ಪ್ರಕರಣ ಪತ್ತೆಗೆ ಗ್ರಾಮೀಣ ಠಾಣೆಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೂ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ವಿವಿಧೆಡೆ ಸಲೀಂ ಕಾರ್ಯ

ಬೆಂಗಳೂರು ಸಮೀಪದ ಚಿಕ್ಕಬಾಣಾವರದ ಸಲೀಂ ಅವರು 1993ರ ಅಖಿಲ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆ ಆದರು. ರಾಜ್ಯ ಪೊಲೀಸ್‌ ಇಲಾಖೆಯ 26 ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಉಡುಪಿ ಹಾಸನದಲ್ಲಿ ಎಸ್‌ಪಿ ಆಗಿದ್ದರು. ಮೈಸೂರು ನಗರ ಪೊಲೀಸ್‌ ಕಮಿಷನರ್‌ ಆಗಿ ಬೆಂಗಳೂರು ನಗರದ ವಿಶೇಷ ಪೊಲೀಸ್‌ ಕಮೀಷನರ್‌ ಆಗಿ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ ಕೆಲಸ ಮಾಡಿದ್ದರು. ಐಎಂಎ ಕ್ರಿಪ್ಟೊ ಕರೆನ್ಸಿ ಹ್ಯಾಕಿಂಗ್ ಹಗರಣ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಪಿಎಸ್‌ಐ ನೇಮಕಾತಿ ಹಗರಣಗಳ ತನಿಖೆಗೆ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ದಳದ ಮೇಲ್ವಿಚಾರಣೆಯನ್ನು ಸಲೀಂ ಅವರೇ ವಹಿಸಿದ್ದರು.

ಪೊಲೀಸ್ ಅಧಿಕಾರಿಗಳಿಗೆ ಸಿಬ್ಬಂದಿಗೆ ಉತ್ತಮ ಕೆಲಸದ ವಾತಾವರಣ ನಿರ್ಮಿಸಲಾಗುವುದು
ಡಾ.ಎಂ.ಎ. ಸಲೀಂ, ಪ್ರಭಾರ ಡಿಜಿ–ಐಜಿಪಿ
ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದು ಹೆಮ್ಮೆ ಅನಿಸುತ್ತಿದೆ
ಅಲೋಕ್‌ ಮೋಹನ್‌, ನಿವೃತ್ತ ಡಿಜಿ–ಐಜಿಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.