ADVERTISEMENT

ಸಮವಸ್ತ್ರದಲ್ಲೇ ಮದ್ಯಸೇವನೆ: ಮೂವರು ಪೊಲೀಸರ ಅಮಾನತು

ಹೊಯ್ಸಳದಲ್ಲಿ ‘ಗುಂಡು’: ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 21:30 IST
Last Updated 23 ಡಿಸೆಂಬರ್ 2020, 21:30 IST

ಕುಣಿಗಲ್: ಸಮವಸ್ತ್ರದಲ್ಲಿದ್ದಾಗ ಮದ್ಯ ಸೇವಿಸಿದ ಆರೋಪದ ಮೇಲೆ ಎಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಡಾ.ಕೆ.ವಂಶಿಕೃಷ್ಣ ಬುಧವಾರ ಅಮಾನತುಗೊಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ ಠಾಣೆ ಎಎಸ್‌ಐ ಶ್ರೀನಿವಾಸ್, ತುರುವೇಕೆರೆ ತಾಲ್ಲೂಕು ದಂಡಿನಶಿವರ ಠಾಣೆ ಕಾನ್‌ಸ್ಟೆಬಲ್‌ ಪರಮೇಶ್ ಮತ್ತು ಸಂತೋಷ್ ಅಮಾನತುಗೊಂಡವರು.

ಹೊಯ್ಸಳದಲ್ಲೇ ‘ಗುಂಡು’:ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದಈ ಮೂವರು ಚುನಾವಣೆ ಕೆಲಸ ಮುಗಿಸಿ ಮಂಗಳವಾರ ರಾತ್ರಿ ಮನೆಗೆ ಹೊರಟಿದ್ದರು. ಈ ವೇಳೆ ಹೊಯ್ಸಳ ವಾಹನದಲ್ಲಿಯೇ ಕುಳಿತು ಮದ್ಯ ಸೇವಿಸಿದ್ದಾರೆ.

ADVERTISEMENT

ಇದನ್ನು ಗಮನಿಸಿದ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ, ಹೊಯ್ಸಳ ವಾಹನದಲ್ಲಿ ಕುಳಿತು, ಸಮವಸ್ತ್ರದಲ್ಲಿ ಮದ್ಯ ಸೇವನೆ ಎಷ್ಟು ಸರಿ ಎಂದು ಪೊಲೀಸ್‌ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ.

ಆಗ ಪೊಲೀಸರು ಮತ್ತು ರಘು ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಪೊಲೀಸರ ದುಂಡಾವರ್ತನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ರಘು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ವೈರಲ್‌ ಆಗಿರುವ ವಿಡಿಯೊಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ವಿವರಣೆ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.