ADVERTISEMENT

ನೂತನ ಸಚಿವರಿಗೆ ಖಾತೆ ಹಂಚಿಕೆ: ರಮೇಶ್‌ ಜಾರಕಿಹೊಳಿಗೆ ಬಯಸಿದ್ದು ಸಿಕ್ಕಿತೇ? 

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 7:47 IST
Last Updated 10 ಫೆಬ್ರುವರಿ 2020, 7:47 IST
   

ಬೆಂಗಳೂರು: ಸಂಪುಟ ವಿಸ್ತರಣೆ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದ ನೂತನ ಮಂತ್ರಿಗಳಿಗೆ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರು ಸೋಮವಾರಖಾತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಅನುಮೋದನೆಗಾಗಿ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗಿದೆ.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಪಟ್ಟಿನಂತೆ ಅವರಿಗೆ ಜಲಸಂಪನ್ಮೂಲ ಇಲಾಖೆಯನ್ನೇ ಹಂಚಿಕೆ ಮಾಡಲಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಇಲಾಖೆಯನ್ನು ಡಿ.ಕೆ ಶಿವಕುಮಾರ್‌ ಅವರು ನಿಭಾಯಿಸಿದ್ದರು.

ಫೆ.6ರಂದು ಹತ್ತು ಮಂದಿ ಶಾಸಕರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ADVERTISEMENT

ಯಾರಿಗೆ ಯಾವ ಖಾತೆ?

ರಮೇಶ್‌ ಜಾರಕಿಹೊಳಿ – ಜಲಸಂಪನ್ಮೂಲ

ಎಸ್‌.ಟಿ ಸೋಮಶೇಖರ್‌ – ಸಹಕಾರ

ಶಿವರಾಮ ಹೆಬ್ಬಾರ್‌– ಕಾರ್ಮಿಕ

ನಾರಾಯಣಗೌಡ– ತೋಟಗಾರಿಗೆ, ಪೌರಾಡಳಿತ

ಬೈರತಿ ಬಸವರಾಜು – ನಗರಾಭಿವೃದ್ಧಿ

ಕೆ. ಸುಧಾಕರ್‌ – ವೈದ್ಯಕೀಯ ಶಿಕ್ಷಣ

ಬಿ.ಸಿ ಪಾಟೀಲ – ಅರಣ್ಯ

ಶ್ರೀಮಂತ ಪಾಟೀಲ – ಜವಳಿ

ಗೋಪಾಲಯ್ಯ – ಸಣ್ಣ ಕೈಗಾರಿಕೆ

ಆನಂದ್‌ ಸಿಂಗ್‌ – ಆಹಾರ ಮತ್ತು ನಾಗರಿಕ ಪೂರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.