ಪ್ರಜಾವಾಣಿ–ವೀರಲೋಕ: ಯುಗಾದಿ ನಾಟಕ ರಚನಾ ಸ್ಪರ್ಧೆ
ಬೆಂಗಳೂರು: ಪ್ರಜಾವಾಣಿ ಮತ್ತು ವೀರಲೋಕ ಪುಸ್ತಕ ಸಂಸ್ಥೆಯು ಯುಗಾದಿ ನಾಟಕ ರಚನಾ ಸ್ಪರ್ಧೆ(2025)ಗೆ ಅರ್ಜಿಗಳನ್ನು ಆಹ್ವಾನಿಸಿದೆ. ನಾಟಕಗಳನ್ನು ಕಳುಹಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ.
ಮೊದಲನೇ ಬಹುಮಾನ ₹ 25,000, ಎರಡನೇ ಬಹುಮಾನ ₹ 15,000, ಮೂರನೇ ಬಹುಮಾನ ₹ 10,000 ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000 ನೀಡಲಾಗುವುದು.
ಸ್ಪರ್ಧೆಯ ನಿಯಮಗಳು
ವಸ್ತುವಿನ ಆಯ್ಕೆಗೆ ಯಾವುದೇ ನಿರ್ಬಂಧಗಳಿಲ್ಲ.
ನಾಟಕವು ಕನ್ನಡ ಭಾಷೆಯಲ್ಲಿನ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ಭಾಷೆಯ ಅನುವಾದವಾಗಿರಬಾರದು. ಈ ಮೊದಲು ಮಾಧ್ಯಮಗಳಲ್ಲಿ ಪ್ರಕಟ ಅಥವಾ ಪ್ರಸಾರವಾಗಿರಬಾರದು.
ರಚನೆ ಮೂರು ಅಂಕದ್ದಾಗಿರಬೇಕು.
ನಾಟಕೀಯತೆ ಪ್ರಧಾನ ಗುಣವಾಗಿರಬೇಕು.
ರಚನೆಯನ್ನು ಕಡ್ಡಾಯವಾಗಿ ಟೈಪ್ ಮಾಡಿ ಎರಡು ಪ್ರತಿಗಳನ್ನು ಕಳುಹಿಸಬೇಕು.
ಎ–4 ಅಳತೆಯಲ್ಲಿ 45 ರಿಂದ 50 ಪುಟಗಳ ಮಿತಿಯಲ್ಲಿರಬೇಕು. ಫಾಂಟ್ ಸೈಜ್ 12 ಇರಬೇಕು.
ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ–ಮೇಲ್ ವಿಳಾಸ ಒದಗಿಸಬೇಕು. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣ ಭಾವಚಿತ್ರದೊಂದಿಗೆ ಕಿರು ಪರಿಚಯವನ್ನು ಕಳುಹಿಸಬೇಕು.
ಪ್ರವೇಶಗಳ ಲಕೋಟೆಯ ಮೇಲೆ ‘ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ’ಗಾಗಿ ಎಂದು ಸ್ಪಷ್ಟವಾಗಿ ಬರೆಯಬೇಕು.
ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಸ್ಪರ್ಧೆಗೆ ಕಳುಹಿಸಿದ ರಚನೆಗಳನ್ನು ಹಿಂದಿರುಗಿಸುವುದಿಲ್ಲ.
ಬಹುಮಾನಿತ ನಾಟಕಗಳನ್ನು ಯಾವುದೇ ಸ್ವರೂಪದಲ್ಲಿ ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಕಾಯ್ದಿರಿಸಿಕೊಂಡಿದೆ.
ಸಂಪಾದಕರ ತೀರ್ಮಾನವೇ ಅಂತಿಮ.
ಬಹುಮಾನ...
ಮೊದಲನೇ ಬಹುಮಾನ ₹ 25,000
ಎರಡನೇ ಬಹುಮಾನ ₹ 15,000
ಮೂರನೇ ಬಹುಮಾನ ₹ 10,000
ತೀರ್ಪುಗಾರರ ಮೆಚ್ಚುಗೆ ಪಡೆದ ಇತರೆ ಐದು ನಾಟಕಗಳಿಗೆ ತಲಾ ₹ 5,000
ಪ್ರವೇಶಗಳು ತಲುಪಲು ಕೊನೆಯ ದಿನಾಂಕ: ಫೆಬ್ರುವರಿ 28, 2025
ವಿಳಾಸ: ಸಂಪಾದಕರು, ಪ್ರಜಾವಾಣಿ ಯುಗಾದಿ ನಾಟಕ ರಚನಾ ಸ್ಪರ್ಧೆ ವಿಭಾಗ
ಪ್ರಜಾವಾಣಿ, ನಂ.75, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು–560001
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.