ADVERTISEMENT

Prajwal Revanna | ಜೈಲಿನ ಸಮವಸ್ತ್ರ, ಕೂಲಿ ನಿಗದಿ; ಯಾವುದಕ್ಕೆ ಎಷ್ಟು ಶಿಕ್ಷೆ?

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:09 IST
Last Updated 3 ಆಗಸ್ಟ್ 2025, 6:09 IST
<div class="paragraphs"><p>ಪ್ರಜ್ವಲ್‌ ರೇವಣ್ಣ</p></div>

ಪ್ರಜ್ವಲ್‌ ರೇವಣ್ಣ

   

ಬೆಂಗಳೂರು: ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಅಪರಾಧಿ ಎಂದು ನಿರ್ಣಯಿಸಲಾಗಿದ್ದ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ (34) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿಯ (ಜೀವಮಾನ ಪರ್ಯಂತ) ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಜೈಲಿನ ಸಮವಸ್ತ್ರ, ಕೂಲಿ ನಿಗದಿ

ADVERTISEMENT

ಅಪರಾಧಿ ಪ್ರಜ್ವಲ್‌ ರೇವಣ್ಣನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಶಿಕ್ಷೆ ನಿಗದಿಯಾದ ಬಳಿಕ ಮತ್ತೆ ಅದೇ ಕಾರಾಗೃಹಕ್ಕೆ ಪ್ರಜ್ವಲ್‌ನನ್ನು ಕರೆದೊಯ್ಯ ಲಾಯಿತು. ಇದುವರೆಗೂ ವಿಚಾರಣಾಧೀನ ಕೈದಿಯಾಗಿದ್ದ ಪ್ರಜ್ವಲ್‌ ಇನ್ನು ಮುಂದೆ ಸಜಾ ಬಂದಿಯಾಗಿ ಜೈಲಿನಲ್ಲಿ ಇರಲಿದ್ದಾನೆ.

ಪ್ರಜ್ವಲ್‌ಗೆ ಕೈದಿ ಸಂಖ್ಯೆ ನೀಡಲಾಗುತ್ತದೆ. ಜತೆಗೆ ಜೈಲಿನ ಸಮವಸ್ತ್ರ ನೀಡಲಾಗುತ್ತದೆ. ಇತರೆ ಸಜಾ ಬಂದಿಗಳಂತೆಯೇ ಪ್ರಜ್ವಲ್‌ಗೂ ಕೂಲಿ ನಿಗದಿಪಡಿಸಿ ಕೆಲಸ ನೀಡಲಾಗುವುದು ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದರು.

ಯಾವುದಕ್ಕೆ ಎಷ್ಟು ಶಿಕ್ಷೆ?

ಐಪಿಸಿ ಕಲಂಗಳು

*376(2)(ಎನ್‌): (ಪದೇ ಪದೇ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವನ ಪರ್ಯಂತ ಕಠಿಣ ಜೈಲು ಶಿಕ್ಷೆ ಮತ್ತು ₹5 ಲಕ್ಷ ದಂಡ‌

*376(2)(ಕೆ): (ಪ್ರಬಲ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ) ಈ ಕಲಂನಡಿಯ ಅಪರಾಧಕ್ಕೆ ಜೀವಾವಧಿ (ಜೀವಮಾನ ಪರ್ಯಂತ) ಜೈಲು ಶಿಕ್ಷೆ, ₹5 ಲಕ್ಷ ದಂಡ.

*354(ಬಿ): (ವಿವಸ್ತ್ರಗೊಳಿಸುವಾಗ ಆಕೆಯ ಮೇಲೆ ಹಲ್ಲೆ) ಈ ಕಲಂನ ಅಡಿಯ ಅಪರಾಧಕ್ಕೆ 7 ವರ್ಷ ಜೈಲು ಶಿಕ್ಷೆ ₹50 ಸಾವಿರ ದಂಡ.

*354-ಎ: (ಮಹಿಳೆಯ ಘನತೆಗೆ ಚ್ಯುತಿ) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ.

*354(ಸಿ): (ವಿವಸ್ತ್ರಗೊಳಿಸಿರುವ ಮಹಿಳೆಯನ್ನು ನೋಡಿ ಆನಂದಿಸುವುದು) ಅಡಿ ಅಪರಾಧಕ್ಕೆ 3 ವರ್ಷ ಜೈಲು, ₹25 ಸಾವಿರ ದಂಡ.

*201: (ಅಪರಾಧ ಕೃತ್ಯದ ಸಾಕ್ಷ್ಯ ನಾಶ) ಈ ಕಲಂ ಅಡಿಯ ಅಪರಾಧಕ್ಕೆ 3 ವರ್ಷ ಶಿಕ್ಷೆ, ₹20 ಸಾವಿರ ದಂಡ.

*506: (ಕ್ರಿಮಿನಲ್‌ ಬೆದರಿಕೆ) ಈ ಕಲಂನ ಅಡಿಯಲ್ಲಿ 2 ವರ್ಷ ಶಿಕ್ಷೆ, ₹10 ಸಾವಿರ ದಂಡ.

ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66ಇ (ಖಾಸಗಿತನ ಉಲ್ಲಂಘಿಸಿ ವಿಡಿಯೊ ಮಾಡಿ, ಪ್ರಸಾರ ಮಾಡಿರುವುದು) ಈ ಕಲಂನ ಅಡಿಯ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ, ₹25 ಸಾವಿರ ದಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.