ADVERTISEMENT

ಕ್ರೀಡಾ ರಸಪ್ರಶ್ನೆ ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:15 IST
Last Updated 16 ಡಿಸೆಂಬರ್ 2019, 20:15 IST
ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಏಳು ಮಂದಿ ಅದೃಷ್ಟಶಾಲಿಗಳಿಗೆ ಹಿರಿಯ ಕ್ರಿಕೆಟ್‌ ಆಟಗಾರ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಅವರು ಬೆಂಗಳೂರಿನಲ್ಲಿ ಸೋಮವಾರ ಗೌರವಿಸಿದರು. (ಎಡದಿಂದ) ಭರತ್‌ ರಾಜನ್‌, ಸತೀಶ್‌, ಎಂ.ಸಿ.ಕೃಷ್ಣಕುಮಾರ್‌, ಬಿ.ಅಮರೇಂದ್ರ, ನವಾಜ್‌ ಅಹಮದ್, ಶ್ರೀನಾಥ್‌ ಎಚ್‌.ಆರ್‌. ಮತ್ತು ಅಶ್ವಿನಿ ಚಿತ್ರದಲ್ಲಿದ್ದಾರೆ --–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ. ಏನು ತಿನ್ನುತ್ತೇನೆ ಎನ್ನುವುದರ ಕಡೆಯೂ ಗಮನ ಇಟ್ಟು ಕೊಂಡರೆ ಫಿಟ್‌ನೆಸ್‌ ಕಾಪಾಡಿಕೊಳ್ಳಬಹುದು....’

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ‘ಮೀಟ್‌ ದಿ ಗ್ರೇಟ್‌’ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ನೀಡಿದ ಸರಳ ಸಲಹೆ ಇದು.

‘ಡೆಕ್ಕನ್‌ ಹೆರಾಲ್ಡ್‌’ ಕ್ರೀಡಾ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಲ್ಲಿ ಒಬ್ಬರು ದ್ರಾವಿಡ್‌ಗೆ ಫಿಟ್‌ನೆಸ್‌ಗೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದರು.

ADVERTISEMENT

ಒಬ್ಬ ವಿದ್ಯಾರ್ಥಿನಿ ಸೇರಿ ಏಳು ಮಂದಿ ವಿಜೇತರಿಗೆ ಅವರು ‘ಆಮೇಜಾನ್‌ ಪೇ ವೌಚರ್‌’, ಸ್ಮರಣಿಕೆ ನೀಡಿದರು. ಎರಡು ವಾರ ಕಾಲ ನಡೆದ ಈ ಸ್ಪರ್ಧೆಯಲ್ಲಿ 5,200ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಅದೃಷ್ಟ
ಶಾಲಿಗಳನ್ನು ದ್ರಾವಿಡ್‌ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.