ADVERTISEMENT

ಸೌಜನ್ಯಾ ಪ್ರಕರಣ: ದೆಹಲಿಯ ಸೋನಿಯಾ ಗಾಂಧಿ ನಿವಾಸದ ಬಳಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 22:30 IST
Last Updated 2 ಮಾರ್ಚ್ 2024, 22:30 IST
<div class="paragraphs"><p>ಸೋನಿಯಾ ಗಾಂಧಿ</p></div>

ಸೋನಿಯಾ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸಬೇಕು ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಆಕೆಯ ತಾಯಿ ಹಾಗೂ ದಕ್ಷಿಣ ಕನ್ನಡದ ಹೋರಾಟಗಾರರು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. 

ADVERTISEMENT

ಪ್ರತಿಭಟನೆಯ ನಂತರ, ಗಾಂಧಿಯವರ ಆಪ್ತ ಸಹಾಯಕರೊಬ್ಬರು ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಭೇಟಿಯಾಗಿ ಅಗತ್ಯ ನೆರವಿನ ಭರವಸೆ ನೀಡಿದರು. 

‘ಸೋನಿಯಾ ಗಾಂಧಿಯವರು ಅಸ್ವಸ್ಥರಾಗಿದ್ದರಿಂದ ಅವರ ಆಪ್ತರೊಬ್ಬರು ನಮ್ಮ ಕಷ್ಟವನ್ನು ಆಲಿಸಿದರು. ಪ್ರಕರಣದ ಮರುತನಿಖೆ ಮತ್ತು ನಮಗೆ ನ್ಯಾಯ ದೊರಕಿಸಿಕೊಡಲು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು’ ಎಂದು ತಾಯಿ ಕುಸುಮಾವತಿ ಗೌಡ ತಿಳಿಸಿದರು. 

‘ಮಗಳನ್ನು ಅತ್ಯಾಚಾರವೆಸಗಿ ಘೋರವಾಗಿ ಕೊಲೆ ಮಾಡಲಾಗಿದೆ. ಸೋನಿಯಾ ಅವರ ಭರವಸೆಯು ಮಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೆ, ಇಷ್ಟಕ್ಕೆ ನಾವು ಮೈಮರೆಯುವುದಿಲ್ಲ. ನ್ಯಾಯ ಸಿಗುವವರೆಗೆ ನಿರಂತರ ಹೋರಾಟ ಮಾಡಲಿದ್ದೇವೆ’ ಎಂದು ಅವರು ಹೇಳಿದರು.  ಹೋರಾಟಗಾರರಾದ ಮಹೇಶ ಶೆಟ್ಟಿ ತಿಮರೋಡಿ, ಭಾವನಾ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.