ADVERTISEMENT

ಪಿಯುಸಿ ಫಲಿತಾಂಶ | ಸರ್ಕಾರಿ ಕಾಲೇಜುಗಳಿಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:44 IST
Last Updated 14 ಜುಲೈ 2020, 21:44 IST
   

ಬೆಂಗಳೂರು: ಪಿಯು ಪರೀಕ್ಷೆಯಲ್ಲಿ ಖಾಸಗಿ ಕಾಲೇಜುಗಳು ಶೇ 72.51ರಷ್ಟು ಫಲಿತಾಂಶ ದಾಖಲಿಸಿವೆ. ಕಳೆದ ವರ್ಷ ಶೇ 68.69ರಷ್ಟಿತ್ತು. ಆದರೆ ಸರ್ಕಾರಿ ಕಾಲೇಜುಗಳ ಫಲಿತಾಂಶ ಪ್ರಮಾಣ ಶೇ 46.24ರಷ್ಟಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ 4.66ರಷ್ಟು ಕಡಿಮೆಯಾಗಿದೆ.‌

ಅನುದಾನಿತ ಕಾಲೇಜುಗಳ ಉತ್ತೀರ್ಣ ಪ್ರಮಾಣ ಶೇ 57.64, ಕಾರ್ಪೊರೇಷನ್‌ ಕಾಲೇಜುಗಳಲ್ಲಿ ಶೇ 50.43 ಹಾಗೂ ಸಂಯುಕ್ತ ಕಾಲೇಜುಗಳಲ್ಲಿ ಶೇ 70.47ರಷ್ಟಿದೆ. ವಿವಿಧ ದೈಹಿಕ ನ್ಯೂನತೆಗಳಿರುವ 310 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 218 ಮಂದಿ ಉತ್ತೀರ್ಣರಾಗಿದ್ದಾರೆ. ಅಂಧ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ 70.32ರಷ್ಟಿದೆ. ಕಿವುಡ ಮಕ್ಕಳ ಉತ್ತೀರ್ಣ ಪ್ರಮಾಣ ಶೇ 48.77ರಷ್ಟಿದೆ.

ಸ್ಕ್ಯಾನಿಂಗ್ ಪ್ರತಿ: ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರತಿಗಾಗಿ ಇದೇ 16ರಿಂದ 30ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆಗಸ್ಟ್‌ 3ರಿಂದ 7ರೊಳಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಸ್ಕ್ಯಾನಿಂಗ್‌ ಪ್ರತಿ ತೆಗೆದುಕೊಳ್ಳುವುದು ಕಡ್ಡಾಯ. ಸ್ಕ್ಯಾನಿಂಗ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ₹ 530 ಹಾಗೂ ಮರುಮೌಲ್ಯಮಾಪನದ ಶುಲ್ಕ ಪ್ರತಿ ವಿಷಯಕ್ಕೆ ₹ 1,670 ನಿಗದಿಪಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.