ADVERTISEMENT

ನೋಂದಣಿ ಶುಲ್ಕ ರಿಯಾಯಿತಿ: ಅವಧಿ ವಿಸ್ತರಣೆ?

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 20:12 IST
Last Updated 23 ಮಾರ್ಚ್ 2022, 20:12 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಆಸ್ತಿ ಖರೀದಿ, ಕರಾರು ಪತ್ರ, ಭೋಗ್ಯ ಪತ್ರಗಳನ್ನು ನೋಂದಣಿ ಮಾಡಿಸುವಾಗ ಪಾವತಿಸುವ ನೋಂದಣಿ ಮತ್ತು ‌ಮುದ್ರಾಂಕ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅನುಕೂಲ ಆಗುವಂತೆ ಮಾರ್ಗಸೂಚಿ ದರವನ್ನು ಮಾರ್ಚ್‌ 31ರವರೆಗೆ ಶೇ 10ರಷ್ಟು ಕಡಿತಗೊಳಿಸಿರುವುದನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಎಚ್‌.ಎಂ. ರಮೇಶ್ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘2021-22ರಲ್ಲಿ ₹ 12,655 ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಮಾರ್ಚ್ 17ರವರೆಗೆ ₹ 13,047 ಕೋಟಿ ಸಂಗ್ರಹಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳುವ ವೇಳೆಗೆ ಇನ್ನೂ ₹ 1,000 ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ’ ಎಂದರು.

‘ಕೆಲವು ಕಡೆಗಳಲ್ಲಿ ಮಾರ್ಗಸೂಚಿ ದರ ನಿಗದಿಯಲ್ಲಿ ವ್ಯತ್ಯಾಸ ಆಗಿರುವ ಬಗ್ಗೆ ಸದಸ್ಯರು ಗಮನ ಸೆಳೆದಿದ್ದಾರೆ. ಅದನ್ನು ಪರಿಶೀಲಿಸಲಾಗುವುದು. ಕೋವಿಡ್ ವೇಳೆಯಲ್ಲಿ ನೋಂದಣಿ ಪ್ರಕ್ರಿಯೆಗಳಿಗೆ ಉತ್ತೇಜನ ನೀಡಲು ಶೇ 10ರಷ್ಟು ರಿಯಾಯಿತಿ ನೀಡಲಾಗಿತ್ತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.