ADVERTISEMENT

ತುರ್ತು ಪರಿಸ್ಥಿತಿ ಮನಸ್ಥಿತಿಯ ರಾಹುಲ್‌: ಶಹಜಾದ್ ಪೂನಾವಾಲ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 15:31 IST
Last Updated 20 ಸೆಪ್ಟೆಂಬರ್ 2025, 15:31 IST
<div class="paragraphs"><p>ಶಹಜಾದ್ ಪೂನಾವಾಲ&nbsp;</p></div>

ಶಹಜಾದ್ ಪೂನಾವಾಲ 

   

ಬೆಂಗಳೂರು: ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿಯ ಮನಸ್ಥಿತಿಯಲ್ಲೇ (ಎಮರ್ಜೆನ್ಸಿ ಮೈಂಡ್‍ಸೆಟ್‌ ಆಫ್ ಇಂದಿರಾ) ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹಜಾದ್‌ ಪೂನಾವಾಲ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಇಂದಿರಾ ಅವರ ನಿಕಟವರ್ತಿಯೊಬ್ಬರು ‘ಇಂದಿರಾ ಈಸ್‌ ಇಂಡಿಯಾ, ಇಂಡಿಯಾ ಈಸ್‌ ಇಂದಿರಾ’ ಎಂದಿದ್ದರು. ಲೋಕತಂತ್ರ, ಸಂವಿಧಾನಕ್ಕಿಂತ ಪರಿವಾರ ತಂತ್ರ ಮಿಗಿಲು ಎಂದು ಅವರು ಭಾವಿಸುತ್ತಾರೆ. ಚುನಾವಣೆಯಲ್ಲಿ ಸೋತರೆ ಆಯೋಗವನ್ನು, ನ್ಯಾಯಾಲಯದಲ್ಲಿ ಹಿನ್ನಡೆಯಾದರೆ ನ್ಯಾಯಾಂಗ ವ್ಯವಸ್ಥೆಯನ್ನು ದೂಷಿಸುತ್ತಾರೆ. ತೆಲಂಗಾಣ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವರಿಗೆ ಸಮಸ್ಯೆ ಕಾಣುವುದಿಲ್ಲ. ಮಹಾರಾಷ್ಟ್ರದಲ್ಲಿ ಸೋತಾಗ ಸುಪ್ರೀಂಕೋರ್ಟ್‌ಗೆ ಹೋಗಿದ್ದರು ಎಂದು ಟೀಕಿಸಿದರು.

ADVERTISEMENT

‘ರಾಹುಲ್ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಕಳವು ಕುರಿತು ಮಾತನಾಡುವ ಮೂಲಕ ತಮಿಳುನಾಡಿನಿಂದ ಆಯ್ಕೆಯಾದ ಉಪರಾಷ್ಟ್ರಪತಿ, ಅಲ್ಲಿನ ಜನರನ್ನು ಅವಮಾನಿಸಿದ್ದಾರೆ. ಮತ ಕಳವಿನ ಬಗ್ಗೆ ಮಾತನಾಡುವ ರಾಹುಲ್‌ ಗಾಂಧಿ ಅವರು, ನಂಜೇಗೌಡ, ಜಿ.ಪರಮೇಶ್ವರ ಅವರ ಆಡಿಯೊಗಳ ಬಗ್ಗೆ ಮಾತನಾಡಬೇಕು. ಆ ಆಡಿಯೊದಲ್ಲಿ ಪರಮೇಶ್ವರ ಅವರು ಕಟಾಕಟ್, ಕಟಾಕಟ್‌ ಎಂದು ಮತ ಹಾಕುತ್ತಿದ್ದ ಕುರಿತು ಮಾತನಾಡಿದ್ದಾರೆ. ಹಾಗೆಯೇ, ಶಶಿ ತರೂರ್, ಕೀರ್ತಿ ಆಜಾದ್‌ ಅವರ ವಿಡಿಯೊಗಳನ್ನೂ ನೋಡಬೇಕು. ಇಂದಿರಾ ಗಾಂಧಿಯವರು ಮತದಾನದಲ್ಲಿ ಅಕ್ರಮ ಎಸಗಿ ಶಿಕ್ಷೆಗೆ ಒಳಗಿದ್ದನ್ನು ನೆನಪಿಸಿಕೊಳ್ಳಬೇಕು’ ಎಂದರು. 

‘ನಮಸ್ತೆ ಸದಾ ವತ್ಸಲೆ ಹಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿಕ ಕ್ಷಮೆ ಕೇಳಿಸಲಾಯಿತು. ಈಗ ಕೆಲವು ನಾಯಕರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಕಾರ್ಯಕ್ರಮಗಳಲ್ಲಿ ಭಾಗಹಿಸುವ ಮೂಲಕ ರಾಹುಲ್‍ಗೆ ಸಡ್ಡು ಹೊಡೆಯುತ್ತಿದ್ದಾರೆ’ ಎಂದರು. 

ಸುದ್ದಿಗೋಷ್ಠಿಯಲ್ಲಿ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್‌, ಮಾಜಿ ಸಂಸದ ಮುನಿಸ್ವಾಮಿ,  ಶಾಸಕ ಸಿ.ಕೆ.ರಾಮಮೂರ್ತಿ, ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರಶಾಂತ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಗುಂಡಿಗಳ ಮಾದರಿ ಸರ್ಕಾರ. ಹಗರಣಗಳ ಮೂಲಕ ಲೂಟಿ ನಡೆಸಿದ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿರುವ ಸರ್ಕಾರ
-ಶಹಜಾದ್‌ ಪೂನಾವಾಲ, ಬಿಜೆಪಿ ರಾಷ್ಟ್ರೀಯ ವಕ್ತಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.