ADVERTISEMENT

ಮಂತ್ರಾಲಯ ತಲುಪಿದ ತುಂಗಭದ್ರಾ ನೀರು, ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 6:03 IST
Last Updated 12 ಆಗಸ್ಟ್ 2019, 6:03 IST
   

ರಾಯಚೂರು: ಹೊಸಪೇಟೆ ತುಂಗಭದ್ರಾ ಜಲಾಶಯದಿಂದ ನೀರು ಹೊರ ಹೊರಬಿಡಲಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಮಂತ್ರಾಲಯ ತಲುಪಿತು.

ನೀರಿಲ್ಲದೆ ಬರಿದಾಗಿದ್ದ ನದಿಗೆ ಜೀವಕಳೆ ತುಂಬಿಕೊಂಡಿದ್ದು, ಆಗಸ್ಟ್ 14ರಿಂದ ರಾಯರ ಆರಾಧನಾ ಮಹೋತ್ಸವಕ್ಕೆ ಬರುವ ಭಕ್ತರು ತುಂಗಾದಲ್ಲಿ ಪುಣ್ಯಸ್ನಾನಕ್ಕೆ ಮಾಡಲು ಸಾಧ್ಯವಾಗಲಿದೆ.

ತುಂಗಭದ್ರಾ ನದಿ ನೀರು ಬರುತ್ತಿದ್ದಂತೆ ಮಂತ್ರಾಲಯ ಮಠದಲ್ಲಿ ಸಂಭ್ರಮ ಮನೆಮಾಡಿದೆ. ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನದಿತೀರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.