ADVERTISEMENT

ಕಾರವಾರದಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 1:24 IST
Last Updated 6 ಜೂನ್ 2019, 1:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ನಗರವೂ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಗುರವಾರ ಬೆಳಿಗಿನ ಜಾವ 4ರಿಂದ 5ರವರೆಗೆ ಉತ್ತಮ ಮಳೆಯಾಗಿದೆ. ಇದು ಕಾರವಾರದಲ್ಲಿ ಸುರಿದ ವರ್ಷದ ಮೊದಲ ಪೂರ್ವ ಮುಂಗಾರು ಮಳೆಯಾಗಿದೆ.

ರಭಸದ ಗಾಳಿ, ಮಿಂಚು ಗುಡುಗಿನೊಂದಿಗೆ ಬಿರುಸಿನ ಮಳೆಯಾಯಿತು. ನಗರದಲ್ಲಿ ವಿದ್ಯುತ್ ಕೈಕೊಟ್ಟಿದೆ. ಹೊನ್ನಾವರದಲ್ಲೂ ಇದೇ ರೀತಿಯಾಗಿದೆ.

ವಿಪರೀತ ಸೆಕೆಯಿಂದ ಕಂಗೆಟ್ಟಿದ್ದ ಜನರು ಮಳೆಯಿಂದ ತುಸು ತಂಪಿನ ವಾತಾವರಣವಾಗಿ ನಿರಾಳರಾದರು. ಎರಡು ದಿನಗಳಿಂದ ದಿನವಿಡೀ ಮೋಡ ಕವಿದ ವಾತಾವರಣವಿತ‌್ತು. ಒಂದು ವಾರದ ಹಿಂದೆ ಕಾರವಾರದಲ್ಲಿ ಕನಿಷ್ಠ ಉಷ್ಣಾಂಶ 28 ಡಿಗ‌್ರಿ ಸೆಲ್ಷಿಯಸ್ ಮತ‌ು ಗರಿಷ್ಠ 38 ಡಿಗ್ರಿ ಸೆಲ್ಷಿಯಸ್‌ವರೆಗೂ ತಲುಪಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.