ADVERTISEMENT

ರಾಜಭವನಕ್ಕೆ ಕನ್ನಡದ ಹೆಸರಿರಲಿ: ಜಾಗೃತ ಕರ್ನಾಟಕ ಸಂಘಟನೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 15:46 IST
Last Updated 30 ಜನವರಿ 2026, 15:46 IST
ರಾಜಭವನ
ರಾಜಭವನ   

ಬೆಂಗಳೂರು: ‘ರಾಜಭವನ’ವನ್ನು ‘ಲೋಕಭವನ’ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಕ್ರಮಕ್ಕೆ ತಡೆ ಒಡ್ಡಬೇಕು ಮತ್ತು ‘ರಾಜ್ಯಭವನ’ ಎಂದು ಬದಲಿಸಬೇಕು ಎಂದು ಜಾಗೃತ ಕರ್ನಾಟಕ ಸಂಘಟನೆಯು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

‘ಕೇಂದ್ರ ಸರ್ಕಾರದ ನಡೆಯು ಒಂದು ಆಡಳಿತಾತ್ಮಕ ಕ್ರಮ ಎಂದಷ್ಟೇ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ, ಹಿಂದಿ ಆಡಳಿತ ಭಾಷೆಯಲ್ಲದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಕ್ರಮ ಇದಾಗಿದೆ. ಹೀಗಾಗಿ ಇದನ್ನು ವಿರೋಧಿಸಬೇಕಿದೆ’ ಎಂದಿದೆ.

‘ಕೇಂದ್ರದ ಈ ಹಿಂದಿ ಹೇರಿಕೆಗೆ ರಾಜ್ಯ ಸರ್ಕಾರವು ತನ್ನ ಆಕ್ಷೇಪಣೆಯನ್ನು ಅಧಿಕೃತವಾಗಿ ದಾಖಲಿಸಬೇಕು. ರಾಜ್ಯಪಾಲರ ನಿವಾಸ ಮತ್ತು ಕಚೇರಿ ಸಂಕೀರ್ಣವು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದೆ. ಅದರ ನಿರ್ವಹಣೆ ಮತ್ತು ವೆಚ್ಚ ಎಲ್ಲವನ್ನೂ ರಾಜ್ಯವೇ ಭರಿಸುತ್ತಿದೆ. ಮರುನಾಮಕರಣದ ಅಗತ್ಯ ಇದ್ದಲ್ಲಿ, ‘ರಾಜ್ಯಭವನ’ ಎಂಬ ಕನ್ನಡದ ಹೆಸರನ್ನು ಪರಿಗಣಿಸಬೇಕು’ ಎಂದು ಒತ್ತಾಯಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.