ರಾಮನಗರ: ಏಷ್ಯಾದ ಅತಿದೊಡ್ಡ ಗೂಡು ಮಾರುಕಟ್ಟೆ ಎಂಬ ಖ್ಯಾತಿ ಹೊಂದಿರುವ ಇಲ್ಲಿನ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೋಮವಾರ ಒಂದು ದಿನದಲ್ಲಿಯೇ ಬರೋಬ್ಬರಿ 1.06 ಕೋಟಿ ರೂಪಾಯಿ ಮೊತ್ತದ ದ್ವಿತಳಿ (ಬೈವೋಲ್ಟನ್) ಗೂಡು ಮಾರಾಟವಾಯಿತು.
ರಾಮನಗರ ಮಾರುಕಟ್ಟೆಯಲ್ಲಿ ಒಂದು ದಿನದಲ್ಲಿ ನಡೆದ ದ್ವಿತಳಿ ಗೂಡಿನ ಗರಿಷ್ಠ ವಹಿವಾಟು ಇದಾಗಿತ್ತು. ಒಟ್ಟು 429 ಲಾಟ್ ಗಳಲ್ಲಿ 34,429 ಕೆ.ಜಿ. ದ್ವಿತಳಿ ರೇಷ್ಮೆಗೂಡು ಮಾರಾಟ ನಡೆಯಿತು. ಸರಾಸರಿ 309ರ ಧಾರಣೆ ಇತ್ತು ಎಂದು ಮಾರುಕಟ್ಟೆಯ ಸಹಾಯಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.
ರಾಮನಗರ ಮಾರುಕಟ್ಟೆಗೆ ಸಾಮಾನ್ಯವಾಗಿ ಮಿಶ್ರತಳಿಯ ಗೂಡು (ಸಿ.ಬಿ) ಹೆಚ್ಚಾಗಿ ಬರುತ್ತದೆ. ಆದರೆ ಸೋಮವಾರ ಈ ತಳಿಯ ಗೂಡು ಕೇವಲ 19,099 ಕೆ.ಜಿ. ಯಷ್ಟು ಮಾರುಕಟ್ಟೆಗೆ ಬಂದಿತ್ತು. ಹೀಗಾಗಿ ಬೆಲೆಯೂ ಏರಿದ್ದು ಪ್ರತಿ ಕೆ.ಜಿ.ಗೆ ಸರಾಸರಿ 323 ರೂಪಾಯಿ ಧಾರಣೆ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.