ADVERTISEMENT

ಕೆಪಿಸಿಸಿ ಸಂವಹನ, ಮಾಧ್ಯಮ ಸಮಿತಿ ಪ್ಯಾನಲಿಸ್ಟ್ ಆಗಿ ಟಿ.ಪಿ.ರಮೇಶ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 13:06 IST
Last Updated 24 ಸೆಪ್ಟೆಂಬರ್ 2020, 13:06 IST
ಟಿ.ಪಿ.ರಮೇಶ್‌
ಟಿ.ಪಿ.ರಮೇಶ್‌   

ಮಡಿಕೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಸಂವಹನ ಮತ್ತು ಮಾಧ್ಯಮ ಸಮಿತಿ ಪ್ಯಾನಲಿಸ್ಟ್ ಆಗಿ, ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್ ಅವರು ನೇಮಕಗೊಂಡಿದ್ದಾರೆ.

ರಮೇಶ್ ಅವರು ಕಾಂಗ್ರೆಸ್‌ ಕೊಡಗು ಘಟಕದ ಅಧ್ಯಕ್ಷರಾಗಿ, ಕೆಪಿಸಿಸಿ ಹಿಂದುಳಿದ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ 15 ವರ್ಷಗಳಿಂದ ಕೆಪಿಸಿಸಿ ಸದಸ್ಯರಾಗಿ ಮತ್ತು ಪ್ರಸ್ತುತ ಕೆಪಿಸಿಸಿ ಸಂಯೋಜಕರಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿರುವ ತಿಳಿವಳಿಕೆ ಹಾಗೂ ಅನುಭವದ ಆಧಾರದಲ್ಲಿ ನೂತನ ಜವಾಬ್ದಾರಿಯನ್ನು ನೀಡಿರುವುದಾಗಿ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.