ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ನೈಜೀರಿಯಾ ಪ್ರಜೆ ಜಾನ್ ಸನ್‌ಡೇ (30) ಎಂಬುವರನ್ನು ಕೊಲೆ ಮಾಡಲಾಗಿದೆ.
'ಕಾಚರಕನಹಳ್ಳಿಯಲ್ಲಿ ವಾಸವಿದ್ದ ಜಾನ್ ಹಾಗೂ ಆತನ ಪರಿಚಯಸ್ಥ ಮನೋಜ್ ನಡುವೆ ಗಲಾಟೆ ಆಗಿತ್ತು. ಇದೇ ವೇಳೆಯೇ ಮನೋಜ್, ಚಾಕುವಿನಿಂದ ಇರಿದು ಜಾನ್ ಅವರನ್ನು ಕೊಂದಿದ್ದಾನೆ' ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ 'ಪ್ರಜಾವಾಣಿ'ಗೆ ತಿಳಿಸಿದರು.
'ಕ್ಷುಲ್ಲಕ ಕಾರಣಕ್ಕೆ ಈ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಮನೋಜ್‌ನಿಗೂ ಗಾಯಗಳಾಗಿವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.