ಚಿಕ್ಕಬಳ್ಳಾಪುರ: ನೋಯ್ಡಾದಿಂದ ಬೆಂಗಳೂರಿಗೆ ಕಂಟೇನರ್‌ನಲ್ಲಿ ಸಾಗಿಸುತ್ತಿದ್ದ ಎಂ.ಐ ಕಂಪನಿಯ ಸುಮಾರು ₹3 ಕೋಟಿ ಮೌಲ್ಯದ ಮೊಬೈಲ್‌ಗಳು ಕಳ್ಳತನವಾಗಿವೆ. ಈ ಸಂಬಂಧ ತಾಲ್ಲೂಕಿನ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಕಂಪನಿಯು ದೂರು ದಾಖಲಿಸಿದೆ.
ಕಂಟೇನರ್‌ನಲ್ಲಿ 6,660 ಮೊಬೈಲ್‌ಗಳು ಇದ್ದವು.
ತಾಲ್ಲೂಕಿನ ರೆಡ್ಡಿಗೊಲ್ಲಾರಹಳ್ಳಿ ಗ್ರಾಮದ ಕ್ರಾಸ್ ಬಳಿ ಎನ್ಎಲ್ 01 ಎಎಫ್ 2743 ಸಂಖ್ಯೆಯ ಕಂಟೇನರ್ ನಿಲ್ಲಿಸಿ ಚಾಲಕ ರಾಹುಲ್ ನಾಪತ್ತೆ ಆಗಿದ್ದ. ಕಂಟೇನರ್ ನಿಗದಿತ ಸಮಯಕ್ಕೆ ಬೆಂಗಳೂರು ತಲುಪಿಲ್ಲ. ಕಂಟೇನರ್ ನಿಲುಗಡೆ ಆಗಿರುವುದು ಜಿಪಿಎಸ್ ಮೂಲಕ ಕಂಪನಿಯವರ ಗಮನಕ್ಕೆ ಬಂದಿದೆ.
ತಕ್ಷಣ ಕಂಪನಿ ಸಿಬ್ಬಂದಿ ಪೆರೇಸಂದ್ರ ಠಾಣೆಗೆ ಮಾಹಿತಿ ನೀಡಿದ್ದರು.
‘ಕಂಟೇನರ್‌ನಲ್ಲಿದ್ದ ಶೇ 80ರಿಂದ 90ರಷ್ಟು ಮೊಬೈಲ್‌ಗಳ ಕಳ್ಳತನವಾಗಿದೆ. ಕಂಟೇನರ್ ಅನ್ನು ಕಂಪನಿಯವರ ಸುಪರ್ದಿಗೆ ನೀಡಲಾಗಿದೆ ಕಂಪನಿಯವರು ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದ್ದು ಯಾರನ್ನು ಬಂಧಿಸಿದ್ದೇವೆ, ಎಷ್ಟು ಮೊಬೈಲ್ ವಶಕ್ಕೆ ಪಡೆದಿದ್ದೇವೆ ಎನ್ನುವುದನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.