ADVERTISEMENT

ವಿಧಾನಸಭೆಯಲ್ಲಿ RSS ಗೀತೆ: ನಾನು ಕ್ಷಮೆ ಕೇಳುತ್ತೇನೆ ಎಂದ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 8:31 IST
Last Updated 26 ಆಗಸ್ಟ್ 2025, 8:31 IST
   

ಬೆಂಗಳೂರು: 'ನಾನು ಕಾಂಗ್ರೆಸ್ ನಿಷ್ಠ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಿಮ್ಮ ಭಾವನೆಗೆ ನಾನು ನೋವು ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಕ್ಷಮೆ ಕೇಳುತ್ತೇನೆ' ಎಂದು ಉಪ‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಆರ್‌ಎಸ್‌ಎಸ್‌ ಪ್ರಾರ್ಥನಾ ಗೀತೆ ಹಾಡಿದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಇಂಡಿಯಾ ಒಕ್ಕೂಟಕ್ಕೂ ನಾನು ಕ್ಷಮೆ ಕೇಳ್ತೇನೆ‌. ಕ್ಷಮೆ ಕೇಳುವುದರಲ್ಲಿ ತಪ್ಪೇನೂ ಇಲ್ಲ' ಎಂದರು.

'ನಾನು ಗಾಂಧಿ ಕುಟುಂಬದಿಂದ ರಾಜಕಾರಣ ಮಾಡಿದವನು. ಖರ್ಗೆಯವರ ಮಾರ್ಗದರ್ಶನದಲ್ಲಿ ಬೆಳೆದವನು. ನಾನು ಎಂತೆಂಥವರಿಗೂ ಹೆದರಿದವನಲ್ಲ', ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ಇರಬಹುದು. ಅಸೆಂಬ್ಲಿಯಲ್ಲಿ ಇರಬಹುದು. ನಾನು ಎಲ್ಲವನ್ನೂ ಎದುರಿಸಿದ್ದೇನೆ' ಎಂದರು.

ADVERTISEMENT

'ನಾನು ಹುಟ್ಟು ಕಾಂಗ್ರೆಸ್ ಮನ್. ಸಾಯುವುದೂ ಕಾಂಗ್ರೆಸ್ ಮನ್ ಆಗಿಯೆ‌. ಇದನ್ನು ಪ್ರಶ್ನಿಸಿದವರು ಮೂರ್ಖರು' ಎಂದರು.

'ನನ್ನ ಧರ್ಮ ನಾನು ಬಿಡುವವನಲ್ಲ. ಕ್ರಿಶ್ವಿಯನ್, ಮುಸ್ಲಿಂ, ಜೈನರ ಬಗ್ಗೆ ನಂಬಿಕೆಯಿದೆ. ಧರ್ಮ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವು ಆದರೂ ನಿಷ್ಠೆ ಒಂದೇ. ಪೈಗಂಬರ್ ತತ್ವದ ಬಗ್ಗೆ ನಿಷ್ಠೆ ಉಳ್ಳವನು. ಎಲ್ಲ ಶ್ಲೋಕಗಳನ್ನು ಇರುವಲ್ಲೇ ಹೇಳುವವನು. ಇದರಲ್ಲಿ ಯಾರು ರಾಜಕಾರಣ ಮಾಡಬೇಡಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.