ಸುಳ್ಯ: ಭಾರಿ ಮಳೆ, ಭೂಕುಸಿತದಿಂದ ಸಂಪೂರ್ಣ ನಾಶವಾಗಿರುವ ಸುಳ್ಯ–ಮಡಿಕೇರಿ ನಡುವಣ ಸಂಪಾಜೆ ಘಾಟಿ ರಸ್ತೆ ದುರಸ್ತಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, 20 ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ದೊರಕುವ ನಿರೀಕ್ಷೆ ಇದೆ.
‘ಜೋಡುಪಾಲ– ಮದೆನಾಡು– ಮೊಣ್ಣಂಗೇರಿ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಸುಮಾರು 15 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಯಂತ್ರಗಳ ಸಹಾಯದಿಂದ ಮಾಡುತ್ತಿದೆ.
ಮಳೆ ಬಿಟ್ಟಿದ್ದು, ಇದೇ ವೇಗದಿಂದ ಕಾಮಗಾರಿ ನಡೆದರೆ 20 ದಿನಗಳಲ್ಲಿ ಲಘು ವಾಹನ ಸಂಚಾರ ಸಾಧ್ಯವಾಗ ಬಹುದು. ಭಾರಿ ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಯ ಬೇಕು’ ಎಂದು ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.