ADVERTISEMENT

ಡಿ.10ಕ್ಕೆ 67 ಕನ್ನಡ ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:05 IST
Last Updated 7 ಡಿಸೆಂಬರ್ 2022, 16:05 IST

ಬೆಂಗಳೂರು: ಸಪ್ನ ಬುಕ್ ಹೌಸ್ 67ನೇ ರಾಜ್ಯೋತ್ಸವದ ಪ್ರಯುಕ್ತ ಇದೇ 10ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿ ಭವನದಲ್ಲಿ ವಿವಿಧ ಲೇಖಕರ 67 ಕನ್ನಡ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ‘ನಾಡು ನುಡಿಯ ದೃಷ್ಟಿಯಲ್ಲಿ ಪುಸ್ತಕಗಳು’ ಎಂಬ ವಿಷಯದ ಬಗ್ಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಲಿದ್ದಾರೆ. ಸಾಹಿತಿ ದೊಡ್ಡರಂಗೇಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಭಾಷಾ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ ಅವರು ಕೃತಿಗಳನ್ನು ಪರಿಚಯಿಸುತ್ತಾರೆ ಎಂದು ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿತಿನ್ ಷಾ ತಿಳಿಸಿದ್ದಾರೆ.

ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ದೊಡ್ಡರಂಗೇಗೌಡ, ಸುಧಾ ಮೂರ್ತಿ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಮಲ್ಲೇಪುರಂ ಜಿ. ವೆಂಕಟೇಶ, ಜಿ.ಎನ್. ರಂಗನಾಥರಾವ್, ಪಿ.ಎಸ್. ಶಂಕರ್, ಸಿ.ಎನ್. ರಾಮಚಂದ್ರನ್, ಬಿ.ಆರ್. ಲಕ್ಷ್ಮಣರಾವ್, ಪ್ರೊ.ಜಿ. ಅಬ್ದುಲ್ ಬಷೀರ್, ಸಂಪಟೂರು ವಿಶ್ವನಾಥ್, ಚಂದ್ರಕಾಂತ ಪೋಕಳೆ, ಕುಂ. ವೀರಭದ್ರಪ್ಪ, ಎಂ.ಎಸ್. ನರಸಿಂಹಮೂರ್ತಿ, ರಾ.ನಂ. ಚಂದ್ರಶೇಖರ, ಡಿ.ವಿ. ಗುರುಪ್ರಸಾದ್, ಟಿ.ಆರ್. ಅನಂತರಾಮು, ರಾಘವೇಂದ್ರ ಪಾಟೀಲ, ರಂಗರಾಜು ನಾಗವಾರ ಸೇರಿ 67 ಲೇಖಕರ ಪುಸ್ತಕಗಳು ಲೋಕಾರ್ಪಣೆ ಗೊಳ್ಳಲಿವೆ ಎಂದು ಹೇಳಿದ್ದಾರೆ.

ADVERTISEMENT

ಬೆಳಿಗ್ಗೆ 9.15ರಿಂದ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದಿಂದ ಸುಗಮ ಸಂಗೀತ ಹಾಗೂ ಅಪ್ಪಗೆರೆ ತಿಮ್ಮರಾಜು ಅವರಿಂದ ಜನಪದ ಗೀತೆಗಳ ಗಾಯನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.