ADVERTISEMENT

ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆ ಬೋಗಸ್: ಅಂಬೇಡ್ಕರ್ ಮೊಮ್ಮಗ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 16:13 IST
Last Updated 6 ಜುಲೈ 2025, 16:13 IST
ಪ್ರಕಾಶ್ ಅಂಬೇಡ್ಕರ್ – ಪಿಟಿಐ ಚಿತ್ರ 
ಪ್ರಕಾಶ್ ಅಂಬೇಡ್ಕರ್ – ಪಿಟಿಐ ಚಿತ್ರ    

ಮುಂಬೈ: ಕರ್ನಾಟಕದಾದ್ಯಂತ ಒಳಮೀಸಲಾತಿಗೆ ಸಂಬಂಧಿಸಿ ನಡೆಯುತ್ತಿರುವ ಪರಿಶಿಷ್ಟ ಜಾತಿಯ ಮನೆ–ಮನೆ ಸಮೀಕ್ಷೆಯನ್ನು ಬೋಗಸ್ ಮತ್ತು ನಕಲಿ ಎಂದು ವಂಚಿತ್ ಬಹುಜನ ಅಘಾಡಿ ಸಂಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಬಣ್ಣಿಸಿದ್ದಾರೆ.

‘ಪರಿಶಿಷ್ಟ ಜಾತಿಯ ಬೋಗಸ್ ಸರ್ವೆಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸುತ್ತಿದೆ. ನಿವಾಸಿಗಳೊಂದಿಗೆ ಮಾತನಾಡದೆ ಅಥವಾ ಯಾವುದೇ ನೈಜ ಮಾಹಿತಿಯನ್ನು ಸಂಗ್ರಹಿಸದೆ ಮನೆಗಳಿಗೆ ರಹಸ್ಯವಾಗಿ ನೋಟಿಸ್‌ಗಳನ್ನು ಅಂಟಿಸುವುದು ಯಾವ ರೀತಿಯ ಕಾನೂನುಬದ್ಧ ಸಮೀಕ್ಷೆ? ಮತ್ತು, ಅಂತಹ ನಕಲಿ ಸಮೀಕ್ಷೆಗಳನ್ನು ನಡೆಸುವುದರಿಂದ ಏನು ಪ್ರಯೋಜನ?’ ಎಂದು ಅವರು ಕೇಳಿದ್ದಾರೆ.

‘ಪರಿಶಿಷ್ಟ ಜಾತಿಗಳ ಅನುಚಿತ ಮತ್ತು ಸುಳ್ಳು ಅಂಕಿ–ಅಂಶಗಳನ್ನು ದಾಖಲಿಸಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆಯೇ? ಈ ಮೂಲಕ ಸರ್ಕಾರಿ ವಲಯ ಮತ್ತು ಕಲ್ಯಾಣ ಬಜೆಟ್‌ನಲ್ಲಿ ಅವರ ಪ್ರಾತಿನಿಧ್ಯವನ್ನು ಕಡಿಮೆ ಮಾಡಲು ಉದ್ದೇಶಿಸಿದೆಯೇ? ಪರಿಶಿಷ್ಟ ಜಾತಿಗಳನ್ನು ವಂಚಿಸುವ ಉದ್ದೇಶದಿಂದ ಇದನ್ನು ನಡೆಸಲಾಗುತ್ತಿದೆಯೆ’ ಎಂದು ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.