ADVERTISEMENT

ಪಿಯು ವಾಣಿಜ್ಯದಲ್ಲಿ ದಕ್ಷಿಣ ಕನ್ನಡ, ವಿಜ್ಞಾನದಲ್ಲಿ ಬೆಂಗಳೂರು ಮೊದಲು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 8:17 IST
Last Updated 15 ಏಪ್ರಿಲ್ 2019, 8:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು/ಬೆಂಗಳೂರು: ದ್ವಿತೀಯಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮೂಡುಬಿದ್ರೆಆಳ್ವಾಸ್‌ ಕಾಲೇಜಿನ ಆಲ್ವಿತಾ ಅನ್ಸಿಲಾ ಡಿಸೋಜಾ ಮತ್ತು ಅಳಿಕೆ ಸತ್ಯಸಾಯಿ ವಿಹಾರದ ಶ್ರೀಕೃಷ್ಣ ಶರ್ಮಾ ತಲಾ 596 ಅಂಕಗಳನ್ನು ಪಡೆದು ಮೊದಲ ರ‍್ಯಾಂಕ್ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ಪದ್ಮನಾಭನಗರದ ಕುಮಾರನ್ಸ್‌ ಪಿಯು ಕಾಲೇಜಿನ ಎಸ್‌.ರಜತ್ ಕಶ್ಯಪ್ 594 ಅಂಕ ಪಡೆದು ಮೊದಲ ರ್‍ಯಾಂಕ್‌ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದ ಸಾಧಕರು

ADVERTISEMENT

ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಕೆನರಾ ಪಿಯು ಕಾಲೇಜಿನ ಶ್ರೀಶಾ ಶೆಣೈ (595), ತುಮಕೂರು ವಿದ್ಯಾವಾಹಿನಿ ಕಾಲೇಜಿನ ಪ್ರಜ್ಞಾ ಸತೀಶ್, ಮಂಗಳೂರು ಸಂತ ಫಿಲೋಮಿನಾ ಪಿಯು ಕಾಲೇಜಿನಪಿ.ಸ್ವಸ್ತಿಕ್, ಬೆಂಗಳೂರು ಹೊಸೂರು ರಸ್ತೆಯಕ್ರೈಸ್ಟ್‌ ಪಿಯು ಕಾಲೇಜಿನ ಗೌತಮ್ ರಾಠಿ, ಸತೀಶ್‌ ಪ್ರಣವ್, ಬಸವೇಶ್ವರನಗರ ಕಡಾಂಬಿ ಪಿಯು ಕಾಲೇಜಿನ ಕೆ.ವೈಷ್ಣವಿ, ಜಯನಗರ ಜೈನ್ ಪಿಯು ಕಾಲೇಜಿನ ಸಂದೀಪ್ ರೆಡ್ಡಿ, ವಿಶ್ವೇಶ್ವರಪುರಂ ಮಹಾವೀರ್ ಜೈನ್ ಕಾಲೇಜಿನ ಸರಸ್ವತಿ ಜಯಪಾಲ್ ತಲಾ 594 ಅಂಕಗಳನ್ನು ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದ ಸಾಧಕರು

ಬೆಂಗಳೂರು ಮಲ್ಲೇಶ್ವರಂ ವಿದ್ಯಾಮಂದಿರದ ಕೆ.ದಿವ್ಯಾ, ಜಯನಗರ ಎನ್‌ಎಂಕೆಆರ್‌ವಿ ಕಾಲೇಜಿನ ಪ್ರಿಯಾ ನಾಯಕ್ ತಲಾ 593 ಅಂಕ ಪಡೆದಿದ್ದಾರೆ. ಕಾರ್ಕಳ ತಾಲ್ಲೂಕು ಹೆಬ್ರಿಯ ಎಸ್‌.ಆರ್.ಪಿಯು ಕಾಲೇಜಿನ ರಾಯೀಸಾ, ಹಾಸನ ತಾಲ್ಲೂಕು ಬೀರನಹಳ್ಳಿಯ ಮಾಸ್ಟರ್ಸ್‌ ಪಿಯು ಕಾಲೇಜಿನ ಡಿ.ನಿಕೇತನ್ ಗೌಡ, ಪುತ್ತೂರು ವಿವೇಕಾನಂದ ಕಾಲೇಜಿನ ಜಾಗೃತಿ ಜೆ.ನಾಯಕ್, ಉಡುಪಿ ಮಹಾತ್ಮಾಗಾಂಧಿ ಸ್ಮಾರಕ ಕಾಲೇಜಿನ ಸ್ವಾತಿ ತಲಾ 592 ಅಂಕ ಪಡೆದಿದ್ದಾರೆ. ಬೆಳಗಾವಿ ಗೋವಿಂದರಾಮ್ ಕಾಲೇಜಿನ ಸಾಯೀಶ್ ಮೆಂಡಕೆ, ಬೆಂಗಳೂರು ರಾಜಾಜಿನಗರ ಎಎಸ್‌ಸಿ ಪಿಯು ಕಾಲೇಜಿನ ಜಿ.ಪಲ್ಲವಿ, ಮಂಗಳೂರಿನ ಶಾರದಾ ಕಾಲೇಜಿನ ಎನ್‌.ಪ್ರಥಮ್ ತಲಾ 591 ಅಂಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.