ADVERTISEMENT

ಸದನದಲ್ಲಿ ಬೊಬ್ಬೆ ಹಾಕಿದ ಶೂರರು ಇಂದು ಮೌನವಾಗಿದ್ದೇಕೆ? ಬಿಜೆಪಿ ತಿವಿತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 8:25 IST
Last Updated 27 ಮಾರ್ಚ್ 2021, 8:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸಿ.ಡಿ ಪ್ರಕರಣದ ಬಗ್ಗೆ ಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ ಎಂದು ಪ್ರಶ್ನೆ ಮಾಡಿರುವ ಕರ್ನಾಟಕ ಬಿಜೆಪಿ ಕಾಂಗ್ರೆಸ್‌ನ ನಾಯಕರನ್ನು ಕೆಣಕಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ಪ್ರಕರಣದ ಆರೋಪಿಗಳೊಂದಿಗೆ ಸಂಬಂಧವಿರುವುದನ್ನು ಮಹಾನಾಯಕ ಒಪ್ಪಿಕೊಂಡಿದ್ದಾರೆ. ಪ್ರಕರಣದ ಮಾಸ್ಟರ್ ಮೈಂಡ್‌ಗಳೊಂದಿಗೆ ಯಾವ ರೀತಿಯ ಸಂಬಂಧವಿತ್ತೆಂಬುದನ್ನು ರಾಜ್ಯದ ಜನತೆಯ‌ ಮುಂದೆ ಖಳನಾಯಕ ಬಹಿರಂಗಪಡಿಸಬೇಕು. ಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ,' ಎಂದು ಲೇವಡಿ ಮಾಡಲಾಗಿದೆ.

ಇದರ ಜೊತೆಗೆ#DKShiMustResign(ಡಿಕೆಶಿ ರಾಜೀನಾಮೆ ನೀಡಬೇಕು) ಎಂಬ ಹ್ಯಾಷ್‌ಟ್ಯಾಗ್‌ ಅನ್ನೂ ಬಿಜೆಪಿ ಬಳಸಿದೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ‘ನರೇಶ್ ನನ್ನ ಆಪ್ತ. ಮಾಧ್ಯಮದಲ್ಲಿ ಇದ್ದವನು. ನನಗೆ ಬಹಳ ಪರಿಚಯ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಶ್ ನನ್ನನ್ನು ಸಂಪರ್ಕಿಸಿಲ್ಲ. ಸಹಾಯ ಕೇಳಿಲ್ಲ’ ಎಂದು ಹೇಳಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.