ADVERTISEMENT

ಕಾನಿಷ್ಕ ವಿಶ್ವಾಸ್‌ಗೆ ‘ಶಾಂತಿ ಸ್ವರೂಪ್‌ ಭಟ್ನಾಗರ್‌’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 15:09 IST
Last Updated 26 ಸೆಪ್ಟೆಂಬರ್ 2021, 15:09 IST
ಕಾನಿಷ್ಕ ವಿಶ್ವಾಸ್‌
ಕಾನಿಷ್ಕ ವಿಶ್ವಾಸ್‌   

ಬೆಂಗಳೂರು: ಜವಾಹರಲಾಲ್‌ ನೆಹರೂ ಸೆಂಟರ್‌ ಫಾರ್ ಅಡ್ವಾನ್ಸ್ಡ್‌ಸೈಂಟಿಫಿಕ್‌ ರೀಸರ್ಚ್‌ನ (ಜೆಎನ್‌ಸಿಎಎಸ್‌ಆರ್) ಪ್ರಾಧ್ಯಾಪಕ ಕಾನಿಷ್ಕ ವಿಶ್ವಾಸ್‌ ಅವರು 2021ನೇ ಸಾಲಿನ ‘ಶಾಂತಿ ಸ್ವರೂಪ್‌ ಭಟ್ನಾಗರ್‌’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವವರು ಹಾಗೂ ವಿಶೇಷ ಸಂಶೋಧನೆಗಳನ್ನು ಕೈಗೊಂಡವರಿಗೆ ಪ್ರತಿ ವರ್ಷವೂ ಈ ಪ್ರಶಸ್ತಿ ನೀಡಲಾಗುತ್ತದೆ. ಕಾನಿಷ್ಕ ಅವರು ರಸಾಯನ ವಿಜ್ಞಾನ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ ಅವರಿಗೆ ದೇಶದ ಅತ್ಯುನ್ನತ ವಿಜ್ಞಾನ ಪುರಸ್ಕಾರ ಒಲಿದಿದೆ.

ಕಾನಿಷ್ಕ ನೇತೃತ್ವದ ಸಂಶೋಧಕರ ತಂಡವು ತ್ಯಾಜ್ಯ ಶಾಖವನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ಪರಿಸರ ಸ್ನೇಹಿ ‘ಥರ್ಮೋ ಎಲೆಕ್ಟ್ರಿಕ್‌’ ತಂತ್ರಾಂಶವನ್ನು ಈ ವರ್ಷದ ಮಾರ್ಚ್‌ನಲ್ಲಿ ಅಭಿವೃದ್ಧಿಪಡಿಸಿತ್ತು. ಲ್ಯಾಪ್‌ಟ್ಯಾಪ್‌ನಿಂದ ಉತ್ಪತ್ತಿಯಾದ ಶಾಖವನ್ನು ಮೊಬೈಲ್‌ ಚಾರ್ಜ್‌ ಮಾಡಲು, ಮೊಬೈಲ್‌ನಿಂದ ಉತ್ಪತ್ತಿಗೊಂಡ ಶಾಖವನ್ನು ಕೈಗಡಿಯಾರ ರೀಚಾರ್ಜ್‌ ಮಾಡಲು ಬಳಸುವುದು ಈ ತಂತ್ರಾಂಶದ ಉದ್ದೇಶ ಎಂದು ಹೇಳಲಾಗಿತ್ತು.

ADVERTISEMENT

ವಿಶ್ವದ ಪ್ರತಿಷ್ಠಿತ ಜರ್ನಲ್‌ಗಳಲ್ಲಿ ಒಂದಾದ (ವಿಜ್ಞಾನಕ್ಕೆ ಸಂಬಂಧಿಸಿ) ‘ಸೈನ್ಸ್‌’ನಲ್ಲಿ ಈ ಸಂಶೋಧನೆಯ ಕುರಿತಾದ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.