ADVERTISEMENT

'ಆಕೆ ನನಗೆ ಪರಿಚಿತೆ, ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ'-ತೇಜಸ್ವಿ ಸೂರ್ಯ

'ಅವರೆ ಮನವಿ ಮಾಡಿಕೊಂಡು ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾರೆ'- ತೇಜಸ್ವಿ ಸೂರ್ಯ

ಉಮಾಶಂಕರ ಕಾರ್ಯ
Published 30 ಏಪ್ರಿಲ್ 2019, 13:52 IST
Last Updated 30 ಏಪ್ರಿಲ್ 2019, 13:52 IST
ತೇಜಸ್ವಿ ಸೂರ್ಯ -ಚಿತ್ರ ಕೃಪೆ facebook.com/tejasvi.suryals
ತೇಜಸ್ವಿ ಸೂರ್ಯ -ಚಿತ್ರ ಕೃಪೆ facebook.com/tejasvi.suryals   

ಬೆಂಗಳೂರು: 'ಡಾ. ಸೋಮ್‌ ದತ್ತಾಅವರು ನಮಗೆ ಬಹಳ ಬೇಕಾದ ಸ್ನೇಹಿತರು,ಅವರು ನನ್ನ ವಿರುದ್ಧ ಮಾಡಿರುವ ಟ್ವೀಟ್ ಅನ್ನು ಅವರೇ ಡಿಲೀಟ್ ಮಾಡಿದ್ದಾರೆ, ಅದನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರೂಮುಂದುವರಿಸಬಾರದು ಅಂತ ಕೇಳಿಕೊಂಡಿದ್ದಾರೆ. ಅವರ ಮಾತಿಗೆ ಗೌರವ ಕೊಡಬೇಕಾಗಿರುವುದು ಒಬ್ಬ ಜಂಟಲ್‌ಮನ್ಆಗಿ ನನ್ನ ಕರ್ತವ್ಯ, ಆದ್ದರಿಂದ ನಾನು ಇದನ್ನು ಮುಂದುವರಿಸುವುದಿಲ್ಲ'ಎಂದು ಪ್ರತಿಕ್ರಿಯೆ ನೀಡಿದವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ.

ಬುಧವಾರದಿಂದ ಟ್ವೀಟ್ ಜಾಲವೂ ಸೇರಿದಂತೆ ಹಲವೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 'ಮೀಟು' ವಿಚಾರದ ಬಗ್ಗೆ 'ಪ್ರಜಾವಾಣಿ'ಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

'ಯಾರು ಟ್ವೀಟ್ ಮಾಡಿದರೋ ಅವರೇ ತಮ್ಮ ಖಾತೆಯಿಂದ ಎಲ್ಲಾ ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ, ನಾನು ಈ ರೀತಿ ಬರೆಯಬಾರದಿತ್ತು ಎಂದು ಬೇಸರಪಟ್ಟುಕೊಂಡಿದ್ದಾರೆ. ಮಾಧ್ಯಮದವರಾಗಲಿ, ಬೇರೆ ಯಾರೂ ಇದನ್ನು ಮುಂದುವರಿಸಬಾರದು ಎಂದು ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ. ಅದನ್ನು ನಾನು ಮುಂದುವರಿಸುವುದಿಲ್ಲ' ಎಂದರು.

ADVERTISEMENT

'ನಾನು ರಾಜಕೀಯಕ್ಕೆ ಹೊಸಬ, ರಾಜಕೀಯ ಕ್ಷೇತ್ರಕ್ಕೆ ಬಂದಾಗ ಹಲವು ಅಗ್ನಿಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದು ಆ ಅಗ್ನಿಪರೀಕ್ಷೆಯ ಒಂದು ಭಾಗ. ನನ್ನ ವಿರುದ್ಧಅಪಪ್ರಚಾರದ ಪ್ರಯತ್ನ ನಡೆದಿದೆ. ಅದನ್ನು ಅವರಿಂದಲೇ ಇಲ್ಲಿಗೆ ಮುಕ್ತಾಯಗೊಳಿಸಲಾಗಿದೆ.ನನ್ನ ವಿರುದ್ಧಸುಳ್ಳು ಪ್ರಚಾರ ಮಾಡಲೇಬೇಕು ಅಂತ ಹೊರಟಿರುವರಿಂದ ಈ ರೀತಿಯಾಗಿದೆ'ಎಂದರು.

‘‍ಡಾ.ಸೋಮ್‌ ದತ್ತಾಪರಿಚಯವಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ ಸೂರ್ಯ, ಅವರು ನನಗೆ ಬಹಳ ಬೇಕಾದ ಸ್ನೇಹಿತರು. ಆದರೆ ಅವರೇ ಯಾವುದೇ ವಿಚಾರವನ್ನು ಮುಂದುವರಿಸಬಾರದು ಎಂದು ಹೇಳಿರುವುದರಿಂದ ನಾನು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಮುಂದೊಂದು ದಿನ ಇದೇ ವಿಷಯ ಮತ್ತೆ ಪ್ರಸ್ತಾಪವಾದರೆಏನು ಮಾಡುತ್ತೀರಿ ಎಂದು ಮರುಪ್ರಶ್ನಿಸಿದಾಗ, ಅಂತಹ ಪರಿಸ್ಥಿತಿ ಬಂದಾಗ ಅದಕ್ಕೆ ನಾನು ಪ್ರತಿಕ್ರಿಯೆ ನೀಡುತ್ತೇನೆ ಈಗ ಹೆಚ್ಚಿನ ವಿಷಯಬೇಡ. ಅಂತಹಸಂದರ್ಭ ಬಂದಾಗ ನಾನು ಹೇಳೋದಿಲ್ಲ, ಯಾವ ಮಹಿಳೆ ಇದನ್ನು ಪ್ರಸ್ತಾಪಿಸಿದ್ದಾರೋಅವರೇ ಮುಂದೆ ಬಂದು ಬೇರೆ ರೀತಿ ಮಾತನಾಡುತ್ತಾರೆ ಎಂದರು.

ಈಗತಾನೆ ರಾಜಕೀಯ ಕ್ಷೇತ್ರಕ್ಕೆ ಬಂದಿರುವ ನಾನು ಯುವಕ, ಈ ಸಂದರ್ಭದಲ್ಲಿ ಸಾಕಷ್ಟು ವಿರೋಧಿಗಳು ಹುಟ್ಟಿಕೊಳ್ಳುವುದು ಸಹಜ. ಅದಕ್ಕಾಗಿಯೇ ಇದನ್ನು ಸೃಷ್ಟಿಸುತ್ತಾ ಇರುತ್ತಾರೆ. ನನ್ನ ಮುಖಂಡರಾದ ಮೋದಿ, ಅಮಿತ್ ಶಾ ಅವರಿಗೂ ಹಲವು ಸಲ ಜೈಲಿಗಟ್ಟುವ ಪ್ರಯತ್ನಗಳು ನಡೆದಿದ್ದರೂ ಅವರು ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಾನು ಕೂಡ ಬೆಳೆದು ಬರುವ ನಂಬಿಕೆಯಿಂದಲೇ ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ ಎಂದರು.

ಕನ್ಹಯ್ಯಕುಮಾರ್ ಜೊತೆ ಮಾತನಾಡಿದೆ-ತೇಜಸ್ವಿ

ನಾನು ಕನ್ಹಯ್ಯಕುಮಾರ್ ಜೊತೆ ಮಾತನಾಡಿದೆ. ಉತ್ತರಪ್ರದೇಶದಲ್ಲಿ ಸ್ಪರ್ಧಿಸಿದ್ದಾನೆ. ನಾನು ಇಲ್ಲಿ ಸ್ಪರ್ಧಿಸಿದ್ದೇನೆ. ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಜೊತೆಯೂ ಮಾತನಾಡಿದೆ.ಯುವಕರು ಮುಂದೆ ಬರಬೇಕು. ಅದಕ್ಕಾಗಿಯೇ ವೈಚಾರಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಅದನ್ನು ಬದಿಗೊತ್ತಿ ಸಮಾಜಕ್ಕೆ ಬೇಕಾಗಿರುವ ಒಳ್ಳೆಯ ಕೆಲಸಗಳನ್ನು ಮಾಡಲು ಉತ್ಸುಕನಾಗಿದ್ದೇನೆ. ಇಂತಹ ಮನಸ್ಸುಳ್ಳ ನನ್ನ ಮೇಲೆ ಇಂತಹ ಆರೋಪಗಳು ಬರುವುದು ಸಹಜ, ಇದನ್ನು ಮಾಧ್ಯಮಗಳು ಮುಂದುವರಿಸಬಾರದು ಎಂದು ಮನವಿ ಮಾಡಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.