ಶಿವರಾಮ ಹೆಬ್ಬಾರ
ಮುಂಡಗೋಡ (ಉತ್ತರ ಕನ್ನಡ ಜಿಲ್ಲೆ): ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಯಾಕಾಯಿತು ಎಂಬುದು ಗೊತ್ತಿಲ್ಲ. ಅದು ಪಕ್ಷದ ನಿರ್ಣಯ. ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ಎರಡು ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
‘ಬಿಜೆಪಿ ನಮ್ಮನ್ನು ಉಚ್ಚಾಟಿಸಲ್ಲ. ಪಕ್ಷ ಏನೇ ನಿರ್ಧರಿಸಿದರೂ ನಾನು ಸ್ವಾಗತಿಸುವೆ. ಶಾಸಕ ಸೋಮಶೇಖರ ಹೇಳಿಕೆಗೆ ನೂರಕ್ಕೆ ನೂರಾ ಒಂದರಷ್ಟು ಬೆಂಬಲವಿದೆ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ವಿಧಾನಸಭೆ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ಆಯಿತು. ಶಾಸಕರಾದ ಸುನೀಲಕುಮಾರ, ಆರ್.ಅಶೋಕ ಅವರಿಗೆ ಏನೂ ಆಗಲಿಲ್ಲ. ಪಾಪದ ಶಾಸಕರು ಮಾತ್ರ ಅಮಾನತುಗೊಂಡರು. ದೊಡ್ಡ ನಾಯಕರಿಗೆ ಏನೂ ಆಗಲ್ಲ. ಅವರು ಆರಾಮಾಗಿ ಇರುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.