ADVERTISEMENT

ಮಗನ ಸಾವಿನ ಕುರಿತ ಹೇಳಿಕೆಗೆ ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 9:14 IST
Last Updated 30 ಅಕ್ಟೋಬರ್ 2018, 9:14 IST
   

ಬೆಂಗಳೂರು: ಮಗನ ಸಾವಿಗೆ ಸಂಬಂಧಿಸಿ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ ನೀಡಿರುವ ಹೇಳಿಕೆಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ತೀಕ್ಷ್ಣವಾದ ತಿರುಗೇಟು ನೀಡಿದ್ದಾರೆ.‌

‘ನನ್ನ ಮಗನ ಸಾವು ನನಗೆ ದೇವರು‌ಕೊಟ್ಟ ಶಿಕ್ಷೆ‌‌ ಎಂದು ಗಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ‌ ಪಾಪಗಳಿಗಾಗಿ‌ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜತೆಗೆ, ಸರಣಿಟ್ವೀಟ್‌ ಮೂಲಕ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ‌ಮಾಡಿ, ಮಹದಾಯಿ ವಿವಾದ ಬಗೆಹರಿಸಿ, ತಾರತಮ್ಯ‌ಮಾಡದೆ ನಮಗೆ ಬರಪರಿಹಾರ ನೀಡಿ ಎಂದೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡೆವು. ಯಾವುದನ್ನೂ ಮಾಡಲಿಲ್ಲ. ಆಗ ಲೋಕಸಭಾ ಸದಸ್ಯರಾಗಿದ್ದ ಯಡಿಯೂರಪ್ಪನವರೇ, ನೀವೇನು ಮಾಡಿದ್ದೀರಿ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರೈತರ ಬೆಳೆಯ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭ ಬರುವಂತಹ ಬೆಂಬಲ ಬೆಲೆ ನೀಡುವುದಾಗಿ ಲೋಕಸಭಾ‌ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಿಸಿತ್ತಲ್ಲವೇ? ಯಾವ ರೈತರಿಗೆ ಆ ಬೆಲೆ ಸಿಕ್ಕಿದೆ 'ರೈತನಾಯಕ' ಯಡಿಯೂರಪ್ಪನವರೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.