ADVERTISEMENT

ಸಿದ್ದಾರ್ಥ ನಾಪತ್ತೆ | ಇಡೀ ಕುಟುಂಬವನ್ನೇ ಗೂಗಲಿಸಿದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 10:02 IST
Last Updated 30 ಜುಲೈ 2019, 10:02 IST
   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥನಾಪತ್ತೆ ಸುದ್ದಿ ಪ್ರಕಟವಾಗುತ್ತಿದ್ದಂತೆ ಇವರ ಬಗ್ಗೆ ತಿಳಿಯಲು ಜನ ಗೂಗಲ್‌ ಮೊರೆ ಹೋಗಿದ್ದಾರೆ.

ನಾಪತ್ತೆ ಸುದ್ದಿ ವ್ಯಾಪಕವಾಗುತ್ತಿದ್ದಂತೆ ಜನರು ವಿ.ಜಿ.ಸಿದ್ದಾರ್ಥಕುರಿತು ಹುಡುಕಲು ಪ್ರಾರಂಭಿಸಿದ್ದಾರೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಮಂದಿ ಇವರ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಹೀಗೆ ಹುಡುಕಿದವರಲ್ಲಿ ಕರ್ನಾಟಕದವರೇ ಹೆಚ್ಚು. ಗೋವಾ, ಮಹಾರಾಷ್ಟ್ರ, ತೆಲಂಗಾಣ, ದೆಹಲಿ ನಂತರದ ಸ್ಥಾನಗಳಲ್ಲಿವೆ.

ಮಧ್ಯರಾತ್ರಿ 1 ಗಂಟೆಗೆ ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಬೆಳಿಗ್ಗೆ 6 ಗಂಟೆಯ ನಂತರ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಲು ಪ್ರಾರಂಭಿಸಿದ ನಂತರ ಹುಡುಕಾಟದ ಪ್ರಮಾಣ ಹೆಚ್ಚಾಗಿದೆ. ಬೆಳಿಗ್ಗೆ 10ಗಂಟೆಗಾಗಲೇ ಈ ಶೋಧ ಗರಿಷ್ಟ ಸಂಖ್ಯೆ ತಲುಪಿದೆ.

ADVERTISEMENT

ಜನರುವಿ.ಜಿ.ಸಿದ್ದಾರ್ಥ ಎಂದಷ್ಟೇ ಅಲ್ಲದೆ,ಕೆಫೆ ಕಾಫಿ ಡೇ, ಸಿಸಿಡಿ ಮಾಲೀಕ, ಸಿಸಿಡಿ, ಕೆಫೆ ಕಾಫಿ ಡೇ ಮಾಲೀಕ, ಎಸ್‌.ಎಂ.ಕೃಷ್ಣ, ಸಿದ್ದಾರ್ಥ ಕಾಫಿ ಡೇ, ಸಿಸಿಡಿ ಷೇರಿನ ಬೆಲೆ, ವಿ.ಜಿ.ಸಿದ್ದಾರ್ಥ, ಕಾಫಿ ಡೇ ಮಾಲೀಕ, ಕಾಫಿ ಡೇ, ಸಿಸಿಡಿ ಸಂಸ್ಥಾಪಕ ಎಂದೆಲ್ಲ ಹುಡುಕಾಟ ನಡೆಸಿದ್ದಾರೆ.

ಕೇವಲ ಇಷ್ಟೇ ಅಲ್ಲದೆ ಸಿದ್ದಾರ್ಥ ಅವರ ಪತ್ನಿಯ ಕುರಿತು ಜನ ಹುಡುಕಾಟ ನಡೆಸಿದ್ದಾರೆ. ವಿ.ಜಿ.ಸಿದ್ದಾರ್ಥಪತ್ನಿ,ಮಾಳವಿಕಾ ಸಿದ್ದಾರ್ಥ, ಮಾಳವಿಕಾ ಕೃಷ್ಣ ಸಿದ್ದಾರ್ಥ, ಮಾಳವಿಕಾ ಕೃಷ್ಣ, ಮಾಳವಿಕ ಕೃಷ್ಣ ವಿ.ಜಿ. ಸಿದ್ದಾರ್ಥ,ಸಿದ್ಧಾರ್ಥನಾಪತ್ತೆ, ವಿ.ಜಿ.ಸಿದ್ದಾರ್ಥನಾಪತ್ತೆ, ವಿ.ಜಿ.ಸಿದ್ದಾರ್ಥಪತ್ರ, ಸಿದ್ದಾರ್ಥಕಾಫಿ ಡೇ, ಸಿದ್ದಾರ್ಥಕುಟುಂಬ ಚಿತ್ರ, ವಿ.ಜಿ ಸಿದ್ದಾರ್ಥಸಾವು, ವಿ.ಜಿ.ಸಿದ್ದಾರ್ಥಆತ್ಮಹತ್ಯೆ... ಎಂದೂ ಹುಡುಕಾಟ ನಡೆಸಿದ್ದಾರೆ.

ಟ್ವಿಟ್ಟರ್‌ನಲ್ಲಿಯೂ ವಿ.ಜಿ.ಸಿದ್ದಾರ್ಥಹಾಗೂ ಕೆಫೆ ಕಾಫಿ ಡೇ ಟ್ರೆಂಡ್‌ ಆಗಿದೆ. ಟ್ವಿಟರ್‌ ಪ್ರಕಟಿಸುವ ಭಾರತ ಟ್ರೆಂಡ್‌ ಪಟ್ಟಿಯಲ್ಲಿ ಇವರ ಹೆಸರು ಬೆಳಿಗ್ಗೆಯಿಂದಲೇ ಚಾಲ್ತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.