ADVERTISEMENT

ಊಟ, ತಿಂಡಿಗೂ ತೊಂದರೆಯಾಗಿದೆ..: ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿದ ಭೋಜೇಗೌಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 13:14 IST
Last Updated 28 ಫೆಬ್ರುವರಿ 2026, 13:14 IST
   

ಚಿಕ್ಕಮಗಳೂರು: ದುಬೈ ವಿಮಾನ ನಿಲ್ದಾಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಿಲುಕಿದ್ದಾರೆ.

ದುಬೈ ವಿಮಾನ ನಿಲ್ದಾಣದಿಂದ ‘ಪ್ರಜಾವಾಣಿ’ ಜತೆ ದೂರವಾಣಿಯಲ್ಲಿ ಮಾತನಾಡಿದ ಅವರು, ‘ನಾನು ಜೊಹನ್ಸ್ ಬರ್ಗ್‌ನಿಂದ ದುಬೈ ಮೂಲಕ ಭಾರತಕ್ಕೆ ಬರಬೇಕಿತ್ತು. ದುಬೈನಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ವಿಮಾನದಲ್ಲಿ ಕುಳಿತಿದ್ದ ನಮ್ಮನ್ನು ಕೆಳಗೆ ಇಳಿಸಿದ್ದಾರೆ. ಮುಂದೆ ಏನು ಎಂಬುದನ್ನು ಯಾರೂ ಹೇಳುತ್ತಿಲ್ಲ’ ಎಂದರು.

ಇಲ್ಲಿರುವ ಎಲ್ಲರೂ ಆತಂಕದಲ್ಲಿದ್ದಾರೆ. ಊಟ–ತಿಂಡಿಗೂ ತೊಂದರೆಯಾಗಿದೆ. ಮೊಬೈಲ್ ದೂರವಾಣಿಯಲ್ಲಿ ಬ್ಯಾಟರಿ ಕೂಡ ಕಡಿಮೆಯಾಗಿದೆ. ವಿಮಾನ ನಿಲ್ದಾಣದಲ್ಲಿ ಜನ ಹೆಚ್ಚಾಗಿರುವುದರಿಂದ ಚಾರ್ಜ್ ಮಾಡಿಕೊಳ್ಳುವುದು ಕೂಡ ಕಷ್ಟವಿದೆ. ಏನು ಮಾಡಬೇಕು ಎಂಬುದನ್ನು ಯಾರೂ ಹೇಳುತ್ತಿಲ್ಲ ಎಂದು ಹೇಳಿದರು.

ADVERTISEMENT

‘ವಿಸಾ ಇದ್ದವರು ಮಾತ್ರ ವಿಮಾನ ನಿಲ್ದಾಣದಿಂದ ಆಚೆ ಹೋಗಲು ಅವಕಾಶ ಇದೆ. ನನಗೆ ಅಮೆರಿಕ ವಿಸಾ ಇದೆ. ಆದರೆ, ಆಚೆ ಹೋದರೆ ಎಷ್ಟು ಸುರಕ್ಷಿತ ಎನ್ನುವುದು ಕೂಡ ಮುಖ್ಯ. ಆದ್ದರಿಂದ ಪತ್ನಿ ಜತೆಗೆ ಇಲ್ಲೇ ಇದ್ದೇನೆ. ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ. ಮುಂದೇನು ಎಂಬ ಆತಂಕವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.